ಕೆಸರಿನಲ್ಲಿ ಮಿಂದೆದ್ದ ರೈತ, ಕಾರ್ಮಿಕ ಕುಟುಂಬಸ್ಥರು

03sunti01
ಸುಂಟಿಕೊಪ್ಪ ಹೋಬಳಿಯ ಗದ್ದೆಹಳ್ಳದಲ್ಲಿ ಗದ್ದೆ ಆಟ ಮಹಿಳೆಯರ ಕಾಲ್ನಡಿಗೆ 2: ಪರುಷ ಓಟ, 3. ಮಹಿಳೆಯರು ಗದ್ದೆ ಓಟದಲ್ಲಿ ಪಾಲ್ಗೊಂಡಿರುವುದು.
Published on

ಸುಂಟಿಕೊಪ್ಪ: ಭತ್ತದ ಕೃಷಿ ಚಟುವಟಿಕೆಯಿಂದ ರೈತರು ವಿಮುಖವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸುಂಟಿಕೊಪ್ಪ ಹೋಬಳಿಯ ಗದ್ದೆಹಳ್ಳದಲ್ಲಿ ಗದ್ದೆ ಆಟ ಎಂಬ ವಿನೂತನ ಕಾರ್ಯಕ್ರಮದ ರೈತ ಕುಟುಂಬದಲ್ಲಿ ಮಂದಹಾಸ ಮೂಡಿಸಿತು.

ಕೆಸರು ಗದ್ದೆಯಲ್ಲಿ 3 ವರ್ಷದಿಂದ 60 ವರ್ಷ ಮೇಲ್ಪಟ್ಟವರಿಗೂ ಮುಕ್ತ ಕೆಸರು ಗದ್ದೆ ಓಟ, ಈ ವಿಭಾಗದ ರೈತ ಕೂಲಿ ಕಾರ್ಮಿಕರ ಮಕ್ಕಳು ಕುಟುಂಬಸ್ಥರು ಭಾಗವಹಿಸಿ ಕಕ್ಕಡ ಆಟಿ ಸಂಭ್ರಮಕ್ಕೆ ಮುನ್ನುಡಿಯಿಟ್ಟರು.

ಹಿರಿಯ ರಾಜಕಾರಣಿ ಸಮಾಜ ಸೇವಕ ಯಂಕನ ವೈ.ಕರುಂಬಯ್ಯ ಅವರ ಗದ್ದೆಯಲ್ಲಿ ಪ್ರಥಮ ಬಾರಿಗೆ ಸಮಾಜಮುಖಿ ಸಹೃದಯಿ ಬಾಂಧವರು ಚಿಂತನ-ಮಂಥನ ನಡೆಸಿ ಕೆಸರು ಗದ್ದೆಯಲ್ಲಿ 3 ವರ್ಷದ ಮಕ್ಕಳಿಂದ 60 ವರ್ಷದ ಮೇಲ್ಪಟ್ಟ ಪುರುಷ-ಮಹಿಳೆಯರಿಗೆ ಏರ್ಪಡಿಸಿದ್ದ ಕೆಸರು ಗದ್ದೆ ಓಟ, ರಿಲೆ, ಹಗ್ಗ ಜಗ್ಗಾಟ, ಕಾಲ್ನಡಿಗೆ ಸ್ಪರ್ಧೆೆಗಳು ಈ ಭಾಗದ ಸಾವಿರಾರು ಕೃಷಿ ಕುಟುಂಬದವರಿಗೆ ರೋಮಂಚನ ಉಂಟು ಮಾಡಿತು. ಕ್ರೀಡಾ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮಳೆಯ ಸಿಂಚನ ಕಡಿಮೆಯಾಗಿದ್ದರಿಂದ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು.

ಫನ್‌ಗೆಮ್ಸ್ ಸ್ಪರ್ಧೆಯಲ್ಲಿ ದಂಪತಿ ಭಾಗವಹಿಸಿ ನೆರದಿದ್ದವರಿಗೆ ರಸದೌತಣ ನೀಡಿದರು. ಒಂದೇ ಕುಟುಂಬದ ತಾಯಿ-ತಂದೆ, ಮಗ-ಮಗಳು ಒಗ್ಗೂಡಿ ಆಡಿದ ತಿರುಗಿ ಓಟದ ಸ್ಪರ್ಧೆ ಇನ್ನಷ್ಟು ಕುತೂಹಲ ಮುಂಡಿಸಿತು.

ಗದ್ದೆಹಳ್ಳದಲ್ಲಿ ಗದ್ದೆ ಆಟ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವೈ.ಎಂ.ಕರುಂಬಯ್ಯ ಅವರು ರೈತರೇ ದೇಶದ ಬೆನ್ನಲುಬು. ರೈತಾಪಿ ವರ್ಗದಿಂದ ದೇಶದ ಅರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಭತ್ತದ ಗದ್ದೆಯನ್ನು ಪಾಳು ಬಿಡದಂತೆ ಅವರು ಕರೆ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ರೈತರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಅಯೋಜಿಸಿದ್ದು ಶ್ಲಾಘನೀಯವಾದುದು. ಇದರಿಂದ ಕೃಷಿಕರಿಗೆ ಹೆಚ್ಚಿನ ಉತ್ತೇಜನ ದೊರಕಿದಂತಾಗಿದೆ ಎಂದರು.

ಒಟ್ಟಾರೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ರೈತಾಪಿ ವರ್ಗ, ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ಉತೇಜನ ನೀಡಿರುವುದು ಸುತ್ತ್ಯಾರ್ಹವಾದುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net