ಕೆವಿಜಿಬಿ ಕಾಲ್ ಸೆಂಟರ್ ಆರಂಭ

4 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಾಲ್‌ಸೆಂಟರ್ ಸೇವೆ ಆರಂಭಿಸಿದ್ದು, ಈ ಸೇವೆಯನ್ನು ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಸೋಮವಾರ ಸಾರ್ವಜನಿಕಗೊಳಿಸಿದರು.
ಕಾಲ್‌ಸೆಂಟರ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶ್ರೀಕಾಂತ ಭಂಡಿವಾಡ, ಉತ್ತಮ ಸೇವೆಯನ್ನು ಗ್ರಾಹಕ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಕಾಲ್‌ಸೆಂಟರ್ ಸೇವೆ ಆರಂಭಿಸಲಾಗಿದೆ. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ, ಬ್ಯಾಂಕ್ ಯೋಜನೆಗಳ ಬಗ್ಗೆ ಮಾಹಿತಿ, ಬಡ್ಡಿದರ, ಸಾಲ ಮರುಪಾವತಿ ಸಮಾಲೋಚನೆ, ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನ, ಎಟಿಎಂ ಸಮಸ್ಯೆ, ಇತರ ಹಲವು ವಿಷಯಗಳಿಗೆ ತ್ವರಿತ ಪರಿಹಾರವನ್ನು ಉಚಿತ ಟೋಲ್-ಫ್ರೀ ಸಂಖ್ಯೆ (18008906766)ಗೆ ಕರೆ ಮಾಡಿ ಪಡೆಯಬಹುದು ಎಂದರು.
ಬ್ಯಾಂಕಿನ ಐಟಿ ಜನರಲ್ ಮ್ಯಾನೇಜರ್ ಪುನೀತ ಎಂ ಮಾತನಾಡಿ, ಸಂಪರ್ಕ ಕೇಂದ್ರವನ್ನು ಕೇವಲ ಸೇವಾ ಚಾನೆಲ್‌ನಂತೆ ನೋಡದೆ ಬ್ಯಾಂಕ್‌ನ ಉತ್ಪನ್ನಗಳ ಮಾಹಿತಿ ಕಛೇರಿಯಾಗಿ (ವರ್ಚುವಲ್) ನೋಡಲಾಗುತ್ತಿದೆ ಎಂದರು.
ಬ್ಯಾಂಕಿನ ಮಹಾ ಪ್ರಬಂಧಕರಾದ ವಿ. ತೆನ್ನರಸು, ಸತೀಶ ಆರ್, ಸತ್ಯಪ್ರಸಾದ ಎನ್., ಆರ್.ಟಿ. ಕಾಂಬಳೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net