ಕೆವಿಜಿಬಿ-ಎಸ್​ಬಿಐ ಜನರಲ್ ಇನ್ಶೂರೆನ್ಸ್ ಒಡಂಬಡಿಕೆ

21 vikram 8
Published on

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ಮತ್ತು ಎಸ್​ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಯು ಸಾಮಾನ್ಯ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲು ನಗರದ ಕೆವಿಜಿಬಿ ಮುಖ್ಯ ಶಾಖೆಯಲ್ಲಿ ಶುಕ್ರವಾರ ಒಡಂಬಡಿಕೆ ಮಾಡಿಕೊಂಡವು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಹಾಪ್ರಬಂಧಕ ಬಿ.ಸಿ. ರವಿಚಂದ್ರ ಮತ್ತು ಎಸ್​ಬಿಐ ಜನರಲ್ ಇನ್ಶೂರೆನ್ಸ್ ಕಂ. ಪರ ಮಹೇಂದ್ರ ತ್ರಿಪಾಠಿ, ಮುಖ್ಯ ಅನುಸರಣೆ ಕಾನೂನು ಅಧಿಕಾರಿ ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡ ಬಳಿಕ ಕೆವಿಜಿ ಬ್ಯಾಂಕ್ ಪಿ. ಗೋಪಿಕೃಷ್ಣ ಮಾತನಾಡಿ, ಸಾಮಾನ್ಯ ವಿಮಾ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗಮನಿಸಿ ಎಸ್​ಬಿಐ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಮ್ಮ ಗ್ರಾಹಕ ಬಳಗದ ವೈವಿಧ್ಯಮಯ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಿರಂತರ ಶ್ರಮಿಸುತ್ತಿದ್ದೇವೆ. ಈ ಮೈತ್ರಿಯೂ ಅದೇ ದಿಕ್ಕಿನಲ್ಲಿ ಸಾಗಲಿದೆ. ಇದರೊಂದಿಗೆ ಕೆವಿಜಿಬಿ ಗ್ರಾಹಕರು ಕಂಪನಿ ನೀಡುವ ವಿಮಾ ಸುರಕ್ಷತೆ ವ್ಯಾಪ್ತಿಯ ಮೂಲಕ ಅವರ ಆರೋಗ್ಯ, ಮನೆ, ಮೋಟಾರ್, ಆಸ್ತಿ ಇತ್ಯಾದಿಗಳನ್ನು ಸ್ಪರ್ಧಾತ್ಮಕ ದರದ ಪ್ರೀಮಿಯಂ ದರದಲ್ಲಿ ಪಡೆಯಬಹುದು ಎಂದರು.

ಎಸ್​ಬಿಐ ಜನರಲ್ ಇನ್ಶೂರೆನ್ಸ್ ಕಂಪನಿ ಕ್ಲಸ್ಟರ್ ಸೇಲ್ಸ್ ಮ್ಯಾನೇಜರ್ ಸಲೀಂ ಮುಜಾವರ ಮಾತನಾಡಿ, 632 ಶಾಖೆಗಳಲ್ಲಿ ಅಂದಾಜು 88 ಲಕ್ಷ ಗ್ರಾಹಕರನ್ನು ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ತನ್ನ ವ್ಯವಹಾರದ ವೈವಿಧ್ಯಮಯ ವಿಮಾ ಅವಶ್ಯಕತೆಗಳನ್ನು ಮತ್ತು ವೈಯಕ್ತಿಕ ಗ್ರಾಹಕರನ್ನು ಸೃಷ್ಟಿಸಲು ನಮಗೆ ಹೆಚ್ಚಿನ ವ್ಯಾಪ್ತಿ ನೀಡಲಿದೆ ಎಂದರು.

ಬ್ಯಾಂಕ್​ನ ಜನರಲ್ ಮ್ಯಾನೇಜರ್ ಚಂದ್ರಶೇಖರ ಮೊರೊ, ಮುಖ್ಯ ವ್ಯವಸ್ಥಾಪಕಿ ಎಸ್.ಎಸ್. ಮಣ್ಣೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net