ಕೆಳಗೆ ಬಿದ್ದವರನ್ನು ಮೇಲೆತ್ತುವ ಕೆಲಸ ಶ್ರೇಷ್ಠ

Buddha
Published on

ಚಿತ್ರದುರ್ಗ: ಹಣ, ಅಧಿಕಾರ, ಖ್ಯಾತಿ ಪಡೆದವರಿಗೆ ಚಪ್ಪಾಳೆ ಹೊಡೆಯುವುದು ಸಾಮಾನ್ಯ. ಆದರೆ, ಕೆಳಗೆ ಬಿದ್ದವರನ್ನು ಮೇಲೆತ್ತುವ ಕೆಲಸಕ್ಕಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ರಂಗಾರೆಡ್ಡಿ ಅಭಿಪ್ರಾಯಪಟ್ಟರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಮಾನವನ ಶ್ರೇಷ್ಠತೆಗೆ ನೈತಿಕತೆಯೆ ಸಾಧನ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪಾಟೀಲ್ ಪುಟ್ಟಪ್ಪ ಅವರ ಮಾನವ ಕುಲವೇ ನಮ್ಮ ಕುಟುಂಬ, ಪ್ರಪಂಚವೇ ನಮ್ಮ ಮನೆ ಎಂಬ ಮಾತಿನಂತೆ ನಡೆಯಬೇಕಿದೆ. ಅದಕ್ಕಾಗಿ ಪರರಿಗೆ ಒಳಿತನ್ನು ಮಾಡುವುದು, ಕಲಿಸುವುದು, ಪ್ರೀತಿಸುವುದು, ಸ್ನೇಹದಿಂದ ಕಾಣುವುದರಿಂದ ಬದುಕನ್ನು ಸಾರ್ಥಕಗೊಳಿಸಲಿದೆ ಎಂದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಆಚರಣೆ ಹೆಸರಿನಲ್ಲಿ ನಡೆಯುವ ಮೌಢ್ಯ ಹೊರಹಾಕಿದ ಬುದ್ಧ ಮತ್ತು ಆತನ ದಮ್ಮ ನವ ಬೌದ್ಧರಿಗೆ ನಂಬಲರ್ಹವಾದ ಅಮೂಲ್ಯ ಬೌದ್ಧ ದರ್ಶನ ಕೃತಿಯಾಗಿದೆ. ಅದೇ ರೀತಿ ಬಾಬಾ ಸಾಹೇಬರ ಕ್ರಾಂತಿ-ಪ್ರತಿಕ್ರಾಂತಿ ಕೃತಿ ಪೂರ್ತಿಯಾಗಿ ಅರ್ಥೈಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು.

ಮುಖಂಡರಾದ ಬಿ.ಪಿ.ಪ್ರೇಮನಾಥ್, ಬಿ.ಮಂಜುನಾಥ್, ಟಿ.ತಿಮ್ಮಪ್ಪ, ಎಸ್.ಆರ್.ಬೈಯಣ್ಣ, ನಾಗೇಂದ್ರಪ್ಪ, ನೀತಿಗೆರೆ ಮಂಜಪ್ಪ, ನನ್ನಿವಾಳ ರವಿಕುಮಾರ್, ಭೀಮನಕೆರೆ ತಿಪ್ಪೇಸ್ವಾಮಿ, ಬನ್ನಿಕೋಡ್ರು ರಮೇಶ್, ತಣಿಗೆಹಳ್ಳಿ ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net