ಕೆಲಸದಲ್ಲಿ ಕೀಳರಿಮೆ ಬೇಡ

1
ಇಟಗಿ ಸಮೀಪದ ಹುಣಶೀಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಚನ್ನಬಸವ ದೇವರು ಮಾತನಾಡಿದರು. ರವಿ ಚನ್ನಣ್ಣವರ, ಶಂಕರ ಹೊಳಿ, ಚನ್ನಬಸಪ್ಪ ಮೋಕಾಶಿ, ಸಿ.ಆರ್​. ಪಾಟೀಲ ಇತರರಿದ್ದರು.
Published on

ಇಟಗಿ: ಯುವಜನರು ಬಸವಣ್ಣನ ಕಾಯಕ ತತ್ತ್ವ ಜೀವನದಲ್ಲಿ ಅಳವಡಿಸಿಕೊಂಡು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದು ಐಪಿಎಸ್​ ಅಧಿಕಾರಿ ರವಿ ಚನ್ನಣ್ಣವರ ಹೇಳಿದರು
ಸಮೀಪದ ಹುಣಶೀಕಟ್ಟಿ ಗ್ರಾಮದ ರುದ್ರಸ್ವಾಮಿಗಳ ಹಳೆಯಮಠದ ರುದ್ರಸ್ವಾಮಿಗಳ ಬೆಳ್ಳಿ ಮೂರ್ತಿ ಅನಾವರಣ ಹಾಗೂ ಹುಣಶೀಕಟ್ಟಿ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಯುವ ಸಮಾವೇಶ ಹಾಗೂ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಕೆಲಸದಲ್ಲಿ ಕೀಳರಿಮೆ ಬಿಟ್ಟು ನಿರಂತರ ಪರಿಶ್ರಮ ಮತ್ತು ಜ್ಞಾನ ಸಂಪಾದನೆ ಮೂಲಕ ಉನ್ನತ ಗುರಿ ತಲುಪಲು ಸಾಧ್ಯವಿದೆ. ಬಸವಾದಿ ಶರಣರ ವಚನ ಸಾಹಿತ್ಯಗ್ರಂಥ ಸಂರಸಿದ ರುದ್ರಮುನಿ ಶಿವಯೋಗಿಗಳ ಪುಣ್ಯಭೂಮಿಯಲ್ಲಿ ಶ್ರೀಮಠದ ಚನ್ನಬಸವ ದೇವರು ಹುಣಶೀಕಟ್ಟಿ ಸಂಭ್ರಮದಂಥ ಅನೇಕ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರು ಯುವಜನತೆಯಲ್ಲಿ ಧರ್ಮ ಮತ್ತು ಕಾಯಕದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ಸಾನ್ನಿಧ್ಯವಹಿಸಿ ಮಾತನಾಡಿದ ಚನ್ನಬಸವ ದೇವರು, ಕಾಯಕ ನಿಷ್ಠೆ ಮತ್ತು ಪರಿಶ್ರಮದಲ್ಲಿ ರವಿ ಚನ್ನಣ್ಣವರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಹುಣಶೀಕಟ್ಟಿ ಸಂಭ್ರಮಕ್ಕೆ ನಿರೀೆಗೂ ಮೀರಿ ಜನತೆಯಿಂದ ಸ್ಪಂದನೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಧಾರ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮ ಆಯೋಜನೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು. ಶಾಸಕ ಬಾಬಾಸಾಹೇಬ ಪಾಟೀಲ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಂಕರ ಹೊಳಿ, ಚನ್ನಬಸಪ್ಪ ಮೋಕಾಶಿ, ಸಿ.ಆರ್​. ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಆರ್​.ಕೆ. ಅಂಗಡಿ, ಅಶೋಕ ಯರಗೋಪ್ಪ, ರವೀಂದ್ರ ಗಡಾದ, ಶಿಕ ವಿವೇಕ ಕುರಗುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net