ಕೆಲಸದಲ್ಲಿ ಕಾನೂನು ಉಲ್ಲಂಸಬೇಡಿ: ಸರ್ಕಾರಿ ನೌಕರರಿಗೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸಲಹೆ

01
Published on

ತುಮಕೂರು: ಸರ್ಕಾರಿ ನೌಕರರು ಒತ್ತಡಕ್ಕೆ ಮಣಿದು, ಕಾನೂನು ಉಲ್ಲಂಸಿ ತಪ್ಪು ಕೆಲಸ ಮಾಡುವುದು ಭವಿಷ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಎಚ್ಚರಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾೇತ್ರದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆ, ಸವೋರ್ತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ತಮಗೆ ವಹಿಸಿರುವ ಜವಾಬ್ದಾರಿಯ ಬಗ್ಗೆ ರ್ನಿಲಕ್ಷ ವಹಿಸುವುದರಿಂದ ಮತ್ತೊಬ್ಬ ವ್ಯಕ್ತಿಗೆ ತೊಂದರೆಯಾಗುವುದು ಸಹಜ. ಹಾಗಾಗಿ, ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸಿ. ಅನಗತ್ಯ ಹೊರೆ ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ದಕ್ಷತೆಯಿಂದ, ಇತರ ಸಿಬ್ಬಂದಿಯನ್ನು ಹುರಿದುಂಬಿಸಿ ಕೆಲಸ ಮಾಡಿದ ನೌಕರರಿಗೆ ಸವೋರ್ತ್ತಮ ಪ್ರಶಸ್ತಿ ನೀಡಿ ಗೌರವಿಸುತ್ತಿ ರುವುದು ಒಳ್ಳೆಯ ಬೆಳವಣಿಗೆ ಎಂದರು.

ಉತ್ತಮ ಸಮಯ ಪಾಲನೆ, ಸೌಜನ್ಯಯುತ ನಡವಳಿಕೆ, ಸಮಸ್ಯೆ ಆಲಿಸುವ ಗುಣ, ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರನು ಒಂದಿಲೊಂದು ದಿನ ಸವೋರ್ತ್ತಮ ಪ್ರಶಸ್ತಿಗೆ ಭಾಜನರಾಗಬಹುದು ಎಂದರು.

ಜಿಲ್ಲಾ ಮಟ್ಟದ ಸವೋರ್ತ್ತಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್​, ನನಗೆ ಈ ಪ್ರಶಸ್ತಿ ಲಭಿಸುವುದರ ಹಿಂದೆ ನನ್ನ ಇಡೀ ಕಂದಾಯ ಇಲಾಖೆಯ ಶ್ರಮವಿದೆ. ಕರೊನಾ ಸಂದರ್ಭದಲ್ಲಿ ಅವರೆಲ್ಲರೂ ನನ್ನ ಜತೆ ನಿಂತು ಕೆಲಸ ಮಾಡಿದ್ದಾರೆ. ಹಾಗಾಗಿ, ಈ ಪ್ರಶಸ್ತಿಯನ್ನು ಕಂದಾಯ ಇಲಾಖೆಯ ನೌಕರರಿಗೆ ಆರ್ಪಿಸುವುದಾಗಿ ತಿಳಿಸಿದರು.

ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ, ಸರ್ಕಾರಿ ನೌಕರರ ಸಾಕಷ್ಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ, ಇದರಿಂದಾಗಿ ಅನಗತ್ಯ ಕಿರುಕುಳ ನೀಡುವ ಉದ್ದೇಶದಿಂದ ಬರುತಿದ್ದ ದೂರುಗಳ ಸಂಖ್ಯೆ ಇಳಿಮುಖವಾಗಿದೆ.ನೌಕರರ ಕುಟುಂಬ ವರ್ಗದವರಿಗೆ ಕ್ಯಾಸ್​ಲೇಸ್​ ಟ್ರೀಟ್​ಮೆಂಟ್​,ಆನ್​ಲೈನ್​ ಸೇವಾ ವಹಿ ನಿರ್ವಹಣೆ ಸೇರಿದಂತೆ ಹಲವು ಮಾರ್ಪಾಡು ಮಾಡಿಸಲಾಗಿದೆ ಎಂದರು.

ಸರ್ಕಾರಿ ನೌಕರರಲ್ಲಿ ಶೇ.40 ಇರುವ ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಶಿವಮೊಗ್ಗ ನಂತರ ತುಮಕೂರಿನಲ್ಲಿ ಮಹಿಳಾ ಟಕ ತೆರೆಯಲಾಗುತ್ತಿದೆ. ಮೃತರಾದ ಕರೊನಾ ಸೇನಾನಿಗಳಿಗೆ 35 ಲಕ್ಷ ರೂ.ಪರಿಹಾರವನ್ನು ಸರ್ಕಾರದಿಂದ ಕೊಡಿಸಲಾಗುತ್ತಿದೆ ಎಂದರು.

ತಹಸೀಲ್ದಾರ್​ ಮೋಹನಕುಮಾರ್​,ಡಿಡಿಪಿಐ ಸಿ.ನಂಜಯ್ಯ, ಬಿಇಒ ಹನುಮನಾಯ್ಕ್​, ಜಿಲ್ಲಾ ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಪರಶಿವಮೂರ್ತಿ, ಎಚ್​.ಇ.ರಮೇಶ್​, ವೆಂಕಟೇಶಯ್ಯ, ಕೆ.ವಿ.ನಾರಾಯಣ, ವಿ.ಎಂ.ಲಕ್ಷಿ$್ಮಶ ಇದ್ದರು.

ನವೆಂಬರ್​ನಲ್ಲಿ ಕ್ರೀಡಾಕೂಟ: ಈ ವರ್ಷದ ನವೆಂಬರ್​ನಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಅಧ್ಯಕ್ಷ ನರಸಿಂಹರಾಜು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಒಂದು ಕೆಲಸ ನಿರ್ವಹಿಸಲು ಭೌತಿಕ ಶಕ್ತಿ ಜತೆಗೆ ಹೃದಯವಂತಿಕೆಯೂ ಮುಖ್ಯ, ಆಗ ಮಾತ್ರ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯ ಎಂದರು.

10 ನೌಕರರಿಗೆ ಮೇರಿ ದೇವಾಸಿಯ ಪ್ರಶಸ್ತಿ: ಜಿಲ್ಲೆಯ 10 ಜನ ಮಹಿಳಾ ನೌಕರರಿಗೆ ರಾಜ್ಯದ ಪ್ರಥಮ ರಾಜ್ಯಾಧ್ಯಕ್ಷೆ ಮೇರಿ ದೇವಾಸಿಯ ಪ್ರಶಸ್ತಿಯನ್ನು ಜಿಲ್ಲಾ ಸಂದಿಂದ ನೀಡಿ ಗೌರವಿಸಲಾಯಿತು. ತಿಪಟೂರು ತಾಲೂಕು ಬಳವನೇರಳು ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಟಿ.ಎನ್​.ಗೀತಾರಾಣಿ, ತುರುವೇಕೆರೆ ತಾಲೂಕು ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಹರಿಣಿ, ತುಮಕೂರು ಜಿಲ್ಲಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಎಂ.ಪ್ರಮೀಳಾ, ಗುಬ್ಬಿ ಕಂದಾಯ ಇಲಾಖೆಯ ಬೆರಳಚ್ಚುಗಾರ ಡಿ.ಎನ್​ ಸತ್ಯಕಲಾ, ಪಾವಗಡ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್​ ಅಧಿಕಾರಿ ಮಾರಕ್ಕ, ಶಿರಾ ತಾಲೂಕು ಯಜಲಗೆರೆ ಶಿಕ್ಷಕಿ ರಂಗಮ್ಮ, ಕೊರಟಗೆರೆ ತಾಲೂಕು ಕುರಿಹಳ್ಳಿ ಶಾಲೆಯ ಸುಶೀಲಮ್ಮ, ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಆರ್​.ಕವಿತಾ, ಮರಳೂರು ದಿಣ್ಣೆಯ ಸರ್ಕಾರಿ ಉರ್ದು ಶಾಲೆಯ ಖದೀರಾಸುಲ್ತಾನ, ಕುಣಿಗಲ್​ ತಾಲೂಕು ಭಕ್ತರಹಳ್ಳಿ ಸಿನೀಯರ್​ ಮೆಡಿಕಲ್​ ಆಫಿಸರ್​ ಡಾ.ಎಸ್​.ಆರ್​.ಪುಷ್ಪಾ, ಮಧುಗಿರಿ ತಾಲೂಕು ಜಡೆಗೊಂಡನಹಳ್ಳಿ ಶಿಕ್ಷಕಿ ನಾಗರತ್ನಮ್ಮ ಅವರಿಗೆ ಮೇರಿ ದೇವಾಸಿಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಲವರಿಗೆ ಸವೋರ್ತ್ತಮ ಸೇವಾ ಪ್ರಶಸ್ತಿ: ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್​, ಊರ್ಡಿಗೆರೆ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಲ್​.ನರಸಿಂಹಮೂರ್ತಿ, ತುಮಕೂರು ತಾಲೂಕುನ ಸೀತಕಲ್​ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಜೆ.ನವೀನ್​ಕುಮಾರ್​, ಜಿಲ್ಲಾ ಕ್ಷಯರೋಗ ಕೇಂದ್ರದ ಲ್ಯಾಬ್​ ಟೆಕ್ನಿಷಿಯನ್​ ಮಂಗಳಗೌರಮ್ಮ, ಮೈದಾಳ ಪಿಡಿಒ ಸಿ.ಶಶಿಧರ್​, ಜಿಲ್ಲಾಸ್ಪತ್ರೆ ಡಿ ದರ್ಜೆ ನೌಕರ ತಿಮ್ಮಯ್ಯ, ಕುಣಿಗಲ್​ ತಾಲೂಕು ನಾಗಸಂದ್ರದ ವಿದ್ಯಾರ್ಥಿ ನಿಲಯದ ಅಡುಗೆ ಸಿಬ್ಬಂದಿ ಆರ್​.ಬೆಟ್ಟೆಗೌಡ, ಕಂದಾಯ ಇಲಾಖೆ ವಾಹನ ಚಾಲಕ ಸಿ.ಜಯರಾಮ್​, ತಿಪಟೂರು ತಾಲೂಕು ನೋಣವಿನಕೆರೆಯ ಹಿರಿಯ ಪಶುವೈದ್ಯಾಧಿಕಾರಿ ಡಾ.ಮಂಜುನಾಥ್​ ಹಾಗೂ ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಾ.ವೈ.ಕೆ ಬಾಲಕೃಷ್ಣಪ್ಪ ಅವರಿಗೆ ಸವೋರ್ತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net