ಕೆರೆಯಲ್ಲಿ ಯುವಕ ಶವವಾಗಿ ಪತ್ತೆ

Published on

ಚಾಮರಾಜನಗರ: ಸಂತೇಮರಹಳ್ಳಿ ಠಾಣೆ ವ್ಯಾಪ್ತಿಯ ಯಡಿಯೂರು ಕೆರೆಯಲ್ಲಿ ಗುರುವಾರ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಇಬ್ಬರು ವ್ಯಕ್ತಿಗಳ ಮೇಲೆ ದೂರು ದಾಖಲಾಗಿದೆ.

ತಾಲೂಕಿನ ಮಂಗಲ ಗ್ರಾಮದ ನಿವಾಸಿ ಶಿವಶಂಕರಮೂರ್ತಿ (30) ಮೃತ ದುರ್ದೈವಿ. ಈತ ಮೂರು ದಿನಗಳ ಹಿಂದೆ ಅದೇ ಗ್ರಾಮದ ನಿವಾಸಿಗಳಾದ ಮರಿಸ್ವಾಮಿ ಮತ್ತು ಮಹೇಶ್ ಎಂಬುವವರ ಜತೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿಕೊಂಡಿದ್ದರು. ಆದರೆ ಬುಧವಾರ ರಾತ್ರಿ ಮನೆಯಿಂದ ಹೋಗಿದ್ದ ಶಿವಶಂಕರಮೂರ್ತಿ ಅವರು ಮಂಗಲ ಸಮೀಪವಿರುವ ಯಡಿಯೂರುಕಟ್ಟೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂತೇಮರಹಳ್ಳಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಕುಟುಂಬದವರು ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಮರಿಸ್ವಾಮಿ ಮತ್ತು ಮಹೇಶ್ ಎಂಬುವವರ ಮೇಲೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net