ಕೆರೆಯಲ್ಲಿ ಮುಳುಗಿ ಯುವಕ ಸಾವು

Akash gunge
Published on

ಹುಲಸೂರು: ಹೋಳಿ ಹಬ್ಬದಂದು ಬೇಲೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಬಣ್ಣದಾಟವಾಡಿದ ನಂತರ ಕರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಆಕಾಶ ಕಂಟೆಪ್ಪ ಗುಂಗೆ (೨೨) ಮೃತಪಟವ. ಬಣ್ಣದಾಟದ ನಂತರ ಗೆಳೆಯರೊಂದಿಗೆ ಶ್ರೀ ವೀರಭದ್ರೇಶ್ವರ ಕೆರೆಯಲ್ಲಿ ಸ್ನಾನಕ್ಕಾಗಿ ಇಳಿದಿದ್ದು, ಈಜು ಬಾರದೆ ಮುಳುಗಿ ಕೊನೆಯುಸಿರೆಳೆದಿದ್ದಾನೆ.

ತಹಸೀಲ್ದಾರ್ ಶಿವಾನಂದ ಮೇತ್ರೆ, ಸಿಪಿಐ ಅಲಿಸಾಬï, ಪಿಎಸ್‌ಐ ಶಿವಪ್ಪ ಮೇಟಿ ನೇತೃತ್ವದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದಿ ರಾತ್ರಿವರೆಗೆ ಶೋಧ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಶನಿವಾರ ಬೆಳಗ್ಗೆ ಮಹಾರಾಷ್ಟç ನಾಂದೇಡದ ಪರಿಣತರ ತಂಡ ಕಾರ್ಯಚರಣೆ ನಡೆಸಿ ಸಂಜೆ ಶವವನ್ನು ಹೊರತೆಗೆದಿದೆ.

ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net