ಕೆರೆಯಲ್ಲಿ ಮುಳುಗಿ ಅಳಿಯ, ಮಾವ ಸಾವು

Crime Logo
Published on

ಹಾನಗಲ್ಲ: ಈಜಲು ತೆರಳಿದ್ದ ಅಳಿಯ-ಮಾವ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಚಿಕ್ಕಾಂಶಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಮಂಜಪ್ಪ ಬಡಕಣ್ಣನವರ (38) ಹಾಗೂ ಮಾಲತೇಶ ಪ್ರಶಾಂತ ಕುರುಬರ (17) ಮೃತಪಟ್ಟವರು. ಇವರಿಬ್ಬರೂ ಚಿಕ್ಕಾಂಶಿ ಕೆರೆಯಲ್ಲಿ ಈಜಲು ತೆರಳಿದ್ದರು. ಆದರೆ, ಕೆರೆ ಮಧ್ಯದಲ್ಲಿ ಅಳಿಯ ಮಾಲತೇಶ ಮುಳುಗುತ್ತಿರುವುದನ್ನು ಕಂಡು ಮಾವ ಬಸವರಾಜ ಅವನನ್ನು ಹೊರತರಲು ಪ್ರಯತ್ನಿಸಿದ್ದಾನೆ. ಆದರೆ, ಆತನೂ ಹೊರಬರಲಾರದೇ ನೀರಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.

ಹಾನಗಲ್ಲ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲತೇಶನ ಶವ ಹೊರತೆಗೆದಿದ್ದಾರೆ. ಮಾಲತೇಶ ಕುರುಬರ ಪಿಯುಸಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ಮಾವ ಬಸವರಾಜನ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net