ಕೆರೆಯಲ್ಲಿ ಕಾರು ಮುಳುಗಿ ಮಹಿಳೆಯರಿಬ್ಬರ ಸಾವು

CTD KARU APAGATA
Published on

ಚಿತ್ರದುರ್ಗ: ಕಾರೊಂದು ಕೆರೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರು ಅಸು ನೀಗಿದ ಧಾರುಣ ಘಟನೆ ಹೊಸದುರ್ಗ-ಹೊಳಲ್ಕೆರೆ ಮಾರ್ಗ ಬೊ ಮ್ಮನಕಟ್ಟೆಯಲ್ಲಿ ಭಾನುವಾರ ಸಂಜೆ ನಡೆದಿದೆ.

ಮೃತರನ್ನು ಹೊಳಲ್ಕೆರೆ ತಾಲೂಕು ತಾಳ್ಯ ಮೂಲದ,ಬೆಂಗಳೂರು ಬಿಟಿಎಂ ಲೇಔಟ್ ನಿವಾಸಿಗಳಾದ ಅನಿತಾ(40)ಹಾಗೂ ರತ್ನಮ್ಮ(70)ಎಂದು ಗುರುತಿಸಲಾಗಿದೆ.

ನಾಯಿ ಅಡ್ಡ ಬಂದಿದ್ದರಿಂದಾಗಿ,ಕಾರು ಬೊಮ್ಮನಕಟ್ಟೆ ಕೆರೆಯಲ್ಲಿ ಮುಳುಗಿದ್ದು,ಕೂಡಲೇ ಸ್ಥಳೀಯರ ನೆರವಿನೊಂದಿಗೆ ಹೊಳಲ್ಕೆರೆ ಆ ಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಇಬ್ಬರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಕಾರು ಚಾಲಕ ಮಂಜುನಾಥ್ ಹಾಗೂ ಆತನ ಚಿಕ್ಕಮ್ಮ ಮಂಜು ಳಾ ಅಪಾಯದಿಂದ ಪಾರಾಗಿದ್ದಾರೆ.

ಮಂಜುನಾಥ್ ಕುಟುಂಬ ಮದುವೆಗೆಂದು ಬೆಂಗಳೂರಿಂದ ಶನಿವಾರ ಬೀರೂರಿಗೆ ತೆರಳಿದ್ದು,ಹಿಂತಿರುಗುವ ವೇಳೆ ನಡೆದ ಈ ದು ರ್ಘಟನೆಯಲ್ಲಿ ಮಂಜುನಾಥ್ ಅವರ ತಾಯಿ ರತ್ನಮ್ಮ ಹಾಗೂ ಪತ್ನಿ ಅನಿತಾ ಮೃತಪಟ್ಟಿದ್ದಾರೆ. ಡಿವೈಎಸ್‌ಪಿ ಪಿ.ಕೆ.ದಿನಕರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಹೊಳಲ್ಕೆರೆ ಪಿಎಸ್‌ಐ ಸಚಿನ್‌ಪಟೇಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net