ಕೆರೆಗೆ ಹಾರಿ ರೈತ ಆತ್ಮಹತ್ಯೆ

BTP20Photo4
Published on

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಶುಕ್ರವಾರ ರೈತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಎಂ.ಕಿರಣ್(24) ಮೃತಪಟ್ಟವ. ಮೃತ ಕಿರಣ್ ತನ್ನ ತಾಯಿ ಹೆಸರಿನಲ್ಲಿರುವ ಜಮೀನಿನಲ್ಲಿ ಶುಂಠಿ, ತಂಬಾಕು, ರಾಗಿ ಸೇರಿದಂತೆ ಇತರ ಬೆಳೆ ಬೆಳೆಯುಲು ವಿವಿಧ ಬ್ಯಾಂಕ್, ಮಹಿಳಾ ಸಂಘಗಳು, ಖಾಸಗಿ ಫೈನಾನ್ಸ್‌ಗಳು ಹಾಗೂ ಕೈಸಾಲ ಸೇರಿದಂತೆ ಸುಮಾರು ಆರು ಲಕ್ಷ ರೂ.ಸಾಲ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಬೆಳೆ ಬಾರದೆ ಹಾಗೂ ಬೆಳೆ ನಷ್ಟ ಊಂಟಾದ ಹಿನ್ನೆಲೆಯಲ್ಲಿ ಸಾಲ ಹೇಗೆ ತೀರಿಸುವುದು ಎಂದು ಚಿಂತೆಯಿಂದ ಊರಿನ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಮೃತ ತಾಯಿ ಶಶಿಕಲಾ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಂಜೆ ಶವ ಹೊರತೆಗೆದರು. ದೂರು ದಾಖಲಿಸಿಕೊಂಡ ಬೆಟ್ಟದಪುರ ಪೊಲೀಸರು ಸ್ಥಳ ಮಹಜರ್ ಮಾಡಿ, ಮರಣೊತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಶನಿವಾರ ವಾರಸುದಾರರಿಗೆ ಒಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net