ಕೆರೆಗೆ ಹಾರಿ ಯುವಕ ಆತ್ಮಹತ್ಯೆ

11-GPT-1-SACHIN
ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಸಚಿನ್.
Published on


ಗುಂಡ್ಲುಪೇಟೆ:

ಸಂಬಳ ತರುವುದಾಗಿ ಮನೆಯಿಂದ ಹೊರಟ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ಕಲ್ಲಹಳ್ಳಿ ಗ್ರಾಮದ ಕೆ.ಜಿ.ಸಚಿನ್(21) ಮೃತ ಯುವಕ. ಪಟ್ಟಣದ ಮಣಪುರಂ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಭಾನುವಾರ ತನ್ನ ಸ್ನೇಹಿತರನ್ನು ನೋಡಿಕೊಂಡು ಸಂಬಳ ತರುವುದಾಗಿ ಹೇಳಿ ಮನೆಯಿಂದ ಹೊರಟವನು ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ. ತಾನು ಕಲ್ಲುಕಟ್ಟೆ ಕೆರೆಗೆ ಹಾರಿ ಸಾಯುವುದಾಗಿ ತನ್ನ ಕೆಲವು ಸ್ನೇಹಿತರಿಗೆ ಸಂಜೆ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಸೋಮವಾರ ಬೆಳಗ್ಗೆ ಅಗ್ನಿಶಾಮಕ ದಳದ ನೆರವಿನಿಂದ ಹುಡುಕಾಟ ನಡೆಸಿ ಮೃತದೇಹವನ್ನು ಪತ್ತೆಹಚ್ಚಲಾಯಿತು. ಈ ಬಗ್ಗೆ ಮೃತನ ಸಹೋದರ ಶಿವಮೂರ್ತಿ ದೂರು ನೀಡಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net