ಕೆರೆಗೆ ಹಾರಿ ಯುವ ದಂಪತಿ ಸಾವು

ಕೆರೆಗೆ ಹಾರಿ ಯುವ ದಂಪತಿ ಸಾವು
Published on

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನಗರದ ಅಡ್ಲಿಮನೆ ರಸ್ತೆಯ ಸಮೀಪದಲ್ಲಿರುವ ಚಿಕ್ಕ ಕಟ್ಟೆಗೆ ಹಾರಿ ಯುವ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನದ ಇಲಾಹಿ ನಗರದ ನಿವಾಸಿಗಳಾದ ರಿಜ್ವಾನ್ (31) ಹಾಗೂ ಸಮ್ರಿನ್ ಭಾನು (25) ಆತ್ಮಹತ್ಯೆಗೆ ಶರಣಾದ ದಂಪತಿ.
ಸೋಮವಾರ ಸಂಜೆಯಿಂದಲೂ ಜಗಳವಾಡುತ್ತಿದ್ದ ಗಂಡ-ಹೆಂಡತಿ ವಾಗ್ವಾದ ಕೈ-ಕೈ ಮಿಲಾಯಿಸುವ ಹಂತ ತಲುಪಿತ್ತು ಎನ್ನಲಾಗಿದೆ. ಜಗಳದಿಂದ ಬೆಸತ್ತ ಪತ್ನಿ ಸಮ್ರಿನ್ ಭಾನು ಮಂಗಳವಾರ ಬೆಳಗ್ಗೆ ಐದು ಗಂಟೆಗೆ ಮನೆಯಿಂದ ಹೊರ ನಡೆದಿದ್ದಾರೆ. ಸಮ್ರಿನ್ ಅವರನ್ನು ರಿಜ್ವಾನ್ ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೆರೆ ತಲುಪುವ ಮುಂಚೆಯೇ ಪತ್ನಿ ಕೆರೆಗೆ ಹಾರಿದ್ದರು. ಇದರಿಂದ ಆತಂಕಗೊಂಡ ರಿಜ್ವಾನ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net