ಕೆರೆಗಳಿಗೆ ನೀರು ಹರಿಸಲು ಕೋಟಿ ರೂ. ಅನುದಾನ

IMG-nuggehalli 1
ನುಗ್ಗೇಹಳ್ಳಿ ಹೋಬಳಿಯ ದುಗ್ಗೇನಹಳ್ಳಿ ಗ್ರಾಮದ ಕೆರೆ 40 ವರ್ಷಗಳ ನಂತರ ತುಂಬಿದ ಹಿನ್ನಲೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಗಂಗೆ ಪೂಜೆ ನೆರವೇರಿಸಿ ಕೆರೆಗೆ ಬಾಗೀನ ಅರ್ಪಿಸಿದರು.
Published on

ಶಾಸಕ ಸಿ.ಎನ್. ಬಾಲಕೃಷ್ಣ ಮಾಹಿತಿ


ನುಗ್ಗೇಹಳ್ಳಿ: ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಸಹಕಾರದಿಂದ ತಿಪಟೂರು ಭಾಗದ ಹೇಮಾವತಿ ನಾಲೆಯಿಂದ ಸಂತೆಶಿವರ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ರಾಜ್ಯ ಸರ್ಕಾರ 25 ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.


ಹೋಬಳಿಯ ದುಗ್ಗೇನಹಳ್ಳಿ ಗ್ರಾಮದ ಕೆರೆ 40 ವರ್ಷಗಳ ನಂತರ ತುಂಬಿದ ಹಿನ್ನೆಲೆಯಲ್ಲಿ ಗಂಗೆ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.


ತಿಪಟೂರು ಭಾಗದ ಹೇಮಾವತಿ ನಾಲೆಯಿಂದ ಈ ಭಾಗದ 10ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ರಾಜ್ಯ ಕ್ಯಾಬಿನೇಟ್‌ನಲ್ಲಿ ಒಪ್ಪಿಗೆ ದೊರಕ್ಕಿದ್ದು, ಸಈಊ್ಗದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಕಳೆದ ವರ್ಷದಿಂದ ಸಂತೆಶಿವರ ಕೆರೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದ್ದು, ಈ ವರ್ಷ ಹೆಚ್ಚುಮಳೆ ಆಗಿದ್ದರಿಂದ ಕೆರೆ ಬೇಗ ತುಂಬಿದೆ ಎಂದರು.


ಸಂತೆಶಿವರ ಗ್ರಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ನಾಗರತ್ನಾ, ಸದಸ್ಯರಾದ ಪ್ರಕಾಶ್, ಧರ್ಮ, ಆರ್.ಟಿ. ಕುಮಾರ್, ಮುಖಂಡರಾದ ಮಾಜಿ ಪ್ರಧಾನ ದುಗ್ಗೇನಹಳ್ಳಿ ವೀರೇಶ್, ದೊರೆಸ್ವಾಮಿ, ಧನಂಜಯ, ರಮೇಶ್, ಹುಲ್ಲೇನಹಳ್ಳಿ ನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net