

ಹಾಸನ: ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕಾಂತಾರು ಅವರ ಸಮ್ಮುಖದಲ್ಲಿಂದು ಬಿ ಕಾಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ದೊಡ್ಡಪುರ ದೊಡ್ಡಕೆರೆ ಹಾಗೂ ನಿಡೂಡಿ ಕೆರೆಗಳಿಗೆ ಉಚಿತ ಮೀನುಮರಿಗಳನ್ನು ದಾಸ್ತಾನು ಮಾಡಲಾಯಿತು.
ಇದೇ ವೇಳೆ ಮೀನುಗಾರಿಕೆ ಉಪನಿರ್ದೇಶಕರಾದ ವಿವೇಕ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಹರೀಶ್, ಮೀನುಗಾರಿಕೆ ಸಹಾಯಕ ನಿರ್ದೆಶಕರು ಪ್ರೀತಾ, ಬಿ.ಕಾಟೆಹಳ್ಳಿ ಪಂಚಾಯಿತಿ ಕಾರ್ಯದರ್ಶಿ ಜಾಕಿರ್ ಹುಸೇನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.