ಕೆರೆಕೋಡಿ ಬಿದ್ದು ರಸ್ತೆ ಕುಸಿದ ಸ್ಥಳಕ್ಕೆ ರೈತ ಸಂಘ ಹಸಿರು ಸೇನೆ ಮುಖಂಡರು ಭೇಟಿ

ಕೆರೆಕೋಡಿ ಬಿದ್ದು ರಸ್ತೆ ಕುಸಿದ ಸ್ಥಳಕ್ಕೆ ರೈತ ಸಂಘ ಹಸಿರು ಸೇನೆ ಮುಖಂಡರು ಭೇಟಿ
Published on

ಅರಕಲಗೂಡು: ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಪಡಿಸದೆ ಶಾಸಕರು ಮುಂದಿನ ವಿಧಾನಸಭಾ ಚುನಾವಣೆ ಟಿಕೆಟ್‌ಗೆ ಲಾಭಿ ನಡೆಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾಧ್ಯಕ್ಷ ದಿವಾಕರಗೌಡ ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕಿನ ದುಮ್ಮಿ ಬಳಿ ಮಲ್ಲಾಪುರ ಕೆರೆಕೋಡಿ ಬಿದ್ದು ರಸ್ತೆ ಕುಸಿದ ಸ್ಥಳಕ್ಕೆ ಮಂಗಳವಾರ ರೈತ ಸಂಘದ ಮುಖಂಡರೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಕಳೆದ ಏಳೇಂಟು ತಿಂಗಳ ಹಿಂದೆ ಭಾರಿ ಮಳೆ ಹೊಡೆತಕ್ಕೆ ಕೆರೆ ಕೋಡಿ ಬಿದ್ದು ರಸ್ತೆ ಕೊಚ್ಚಿ ಹೋಗಿತ್ತು. ಇದುವರೆಗೂ ರಸ್ತೆ ದುರಸ್ತಿ ಪಡಿಸಿಲ್ಲ. ತಡೆಗೋಡೆ ಕೂಡ ಹಾಕಿಲ್ಲ. ರಸ್ತೆ ತುಂಡಾಗಿದ್ದು ವಿದ್ಯುತ್ ಕಂಬ ವಾಲಿದೆ. ರಸ್ತೆ ಮೇಲೆ ಓಡಾಡುವ ಪ್ರಯಾಣಿಕರ ಮೇಲೆ ವಿದ್ಯುತ್ ಕಂಬ ಬಿದ್ದರೆ ಪ್ರಾಣ ಹಾನಿ ಉಂಟಾಗಲಿದೆ. ತಾಲೂಕಿನ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದರೂ ಚುನಾವಣೆ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದಾರೆ. ಶಾಸಕರಿಗೆ ರಸ್ತೆ ದುರಸ್ತಿ ಪಡಿಸಲು ಆಗದಿದ್ದರೆ ಹೇಳಲಿ, ಜನರ ಬಳಿ ಚಂದಾ ಎತ್ತಿ ದುರಸ್ತಿ ಪಡಿಸಲಾಗುವುದು. ಇನ್ರ್ನೆಂದು ವಾರದಲ್ಲಿ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.


ಹದಗೆಟ್ಟ ರಸ್ತೆ ದುರಸ್ತಿ ಪಡಿಸದ ಶಾಸಕರ ವಿರುದ್ದ ರೈತ ಸಂಘದ ಮುಖಂಡರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಯೋಗಣ್ಣ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net