ಕೆರೆ ನೀರು ತೆರವಿಗೆ ರೈತರ ಆಗ್ರಹ

14-22
ಮಳೆಯಿಂದ ಹೆಚ್ಚುವರಿ ನೀರು ಸಂಗ್ರಹಗೊಂಡಿರುವ ಎಂ.ಕೆ.ಹುಬ್ಬಳ್ಳಿ ಹೊರವಲಯದ ಹುಬ್ಬಳಕವ್ವನ ಕೆರೆಯನ್ನು ರೈತರು ಹಾಗೂ ಪಪಂ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ ವೀಕ್ಷಿಸಿದರು. ಈರಣ್ಣ ಕುರವಿನಕೊಪ್ಪ, ಶಿವಯ್ಯ ಪೂಜೇರ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ಪಟ್ಟಣ ಹೊರವಲಯದ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಇರುವ ಹುಬ್ಬಳಕವ್ವನ ಕೆರೆ ನೀರು ತೆರವು ಮಾಡಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೆಳಹಂತದ ರೈತರು ಬುಧವಾರ ಆಗ್ರಹಿಸಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ ಅವರನ್ನು ಸ್ಥಳಕ್ಕೆ ಕರೆತಂದು ಅಲ್ಲಿನ ಸ್ಥಿತಿ-ಗತಿ ಕುರಿತು ರೈತರು ವಿವರಿಸಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾಗೂ ಪಟ್ಟಣದ ಚರಂಡಿಗಳಿಂದ ಹರಿದು ಬರುವ ಕೊಳಚೆ ನೀರಿನಿಂದ ತುಂಬಿಕೊಂಡಿರುವ ಕೆರೆ, ಒಡೆಯುವ ಹಂತಕ್ಕೆ ತಲುಪಿದೆ. ಇದರಿಂದ ಕೆರೆ ಕೆಳಗೆ ಇರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಕೆರೆಯ ನೀರನ್ನು ಕೂಡಲೆ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈರಣ್ಣ ಕುರವಿನಕೊಪ್ಪ, ಶಿವಯ್ಯ ಪೂಜೇರ, ಸೋಮನಿಂಗಪ್ಪ ಮುದಿಗೌಡ್ರ, ಜಗದೀಶ ಪೂಜೇರ, ಸೋಮನಿಂಗಪ್ಪ ಮುದಿಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net