ಕೆರೆ ತುಂಬುವುದರಿಂದ ರೈತರಿಗೆ ಅನುಕೂಲ

ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ 103 ಎಕರೆ ಪ್ರದೇಶದ ಕೆರೆ ತುಂಬುವ ಕಾರ್ಯಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಚಾಲನೆ ನೀಡಿದರು. ನಾಗಪ್ಪ ಸನದಿ, ಹಾಜಿ ಇಲಾಹಿ ಕಂಗನೊಳ್ಳಿ, ಅಜಯ ಕಡಪಟ್ಟಿ, ಈಶ್ವರ ಆದೆಪ್ಪನ್ನವರ, ಆದರ್ಶ ರೂಗಿಮಠ, ರಾಜು ಕಲಕಂಬ, ಎಲ್.ಬಿ. ನಿಂಗಸಾನಿ ಇತರರಿದ್ದರು.
ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ 103 ಎಕರೆ ಪ್ರದೇಶದ ಕೆರೆ ತುಂಬುವ ಕಾರ್ಯಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಚಾಲನೆ ನೀಡಿದರು. ನಾಗಪ್ಪ ಸನದಿ, ಹಾಜಿ ಇಲಾಹಿ ಕಂಗನೊಳ್ಳಿ, ಅಜಯ ಕಡಪಟ್ಟಿ, ಈಶ್ವರ ಆದೆಪ್ಪನ್ನವರ, ಆದರ್ಶ ರೂಗಿಮಠ, ರಾಜು ಕಲಕಂಬ, ಎಲ್.ಬಿ. ನಿಂಗಸಾನಿ ಇತರರಿದ್ದರು.
Published on

ಜಮಖಂಡಿ: ತಾಲೂಕಿನ ಸಿದ್ದಾಪುರದ 103 ಎಕರೆ ವಿಸ್ತೀರ್ಣದ ಕೆರೆ ತುಂಬುವ ಕಾರ್ಯಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ಭಾನುವಾರ ಚಾಲನೆ ನೀಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗಲಗಲಿಯಿಂದ 22 ಕಿ.ಮೀ. ಪೈಪ್‌ಲೈನ್ ಮಾಡಿಸುವುದಕ್ಕೆ ಅಂದಾಜು 22 ಕೋಟಿ ರೂ. ಖರ್ಚು ಮಾಡಲಾಗಿದೆ. ಕಾರ್ಖಾನೆಗೆ ಶೇ.20 ರಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳುತಿದ್ದೇವೆ. ಸಿದ್ದಾಪುರ ಗ್ರಾಮದ ಕೆರೆ ತುಂಬಿದರೆ ಸುತ್ತಮುತ್ತಲಿನ ಅಂದಾಜು ಏಳೆಂಟು ಗ್ರಾಮಗಳಲ್ಲಿ ನೀರಿನ ಅಂತರ್ಜಲಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ಈ ಭಾಗದಲ್ಲಿ ಹಸಿರು ವೃದ್ಧಿಯಾಗುತ್ತಿದೆ. ರೈತರು, ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂದು ತಿಂಗಳಿಗೆ ತಗಲುವ ಅಂದಾಜು 50 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಲಾಗುವುದು. ಸಂಪೂರ್ಣ ಕೆರೆ ತುಂಬಲು ಅಂದಾಜು 5 ತಿಂಗಳು 24*7 ನೀರನ್ನು ಹರಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ಮಳೆ ಬಾರದ ಹಿನ್ನೆಲೆಯಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗಿದ್ದು, ಸಿದ್ದಾಪುರ ಕೆರೆಗೆ ನೀರು ತುಂಬಿದ್ದರಿಂದ ಹೊಲ- ಗದ್ದೆಗಳಲ್ಲಿ ಕಬ್ಬು, ಮೆಕ್ಕೆಜೋಳ, ಜೋಳ ಮತ್ತಿತರ ಬೆಳೆಗಳನ್ನು ಸಮೃದ್ಧಿಯಿಂದ ಬೆಳೆಯಲು ರೈತರಿಗೆ ಅನುಕೂಲವಾಗಲಿದೆ. ಗುಡಗುಂಟಿ ಪರಿವಾರ ಮತ್ತು ಸುತ್ತಲಿನ ಗ್ರಾಮಸ್ಥರ ಸಹಕಾರದಿಂದ ಕೆರೆಗೆ ನೀರು ತುಂಬಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ನಾಗಪ್ಪ ಸನದಿ, ಹಾಜಿ ಇಲಾಹಿ ಕಂಗನೊಳ್ಳಿ, ಅಜಯ ಕಡಪಟ್ಟಿ, ಈಶ್ವರ ಆದೆಪ್ಪನ್ನವರ, ಆದರ್ಶ ರೂಗಿಮಠ, ರಾಜು ಕಲಕಂಬ, ಎಲ್.ಬಿ. ನಿಂಗಸಾನಿ, ಪಿ.ಎಂ. ಜುಲ್ಫಿ, ಪ್ರಭು ಹೂಗಾರ, ಮಂಜು ಗಲಗಲಿ, ಚಂದು ಸಕ್ಕರೆಪ್ಪಗೋಳ, ರಾಜು ತೆಗ್ಗಿ, ಉಮೇಶ ಭೂಮಾರ, ಹನುಮಂತ ಜಕ್ಕನೂರ, ಪುಂಡಲೀಕ ಗಸ್ತಿ, ಅಡಿವೆಪ್ಪ ಕೊಂಕಣಿ, ನಾಗಪ್ಪ ಪೂಜಾರಿ, ಮುತ್ತಪ್ಪ ದಳವಾಯಿ, ಲಕ್ಷ್ಮಣ ಹುಲ್ಯಾಳ, ಕರೆಪ್ಪ ಜೀರಗಾಳ, ಸಿದ್ದಪ್ಪ ಮೇಲಿನಮನಿ, ಜಿಪಂ ಇಂಜಿನಿಯರ್ ರಾಮಪ್ಪ ರಾಠೋಡ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net