

ರಾಯಬಾಗ: ಹಿರಣ್ಯಕೇಶಿ ನದಿಯಿಂದ ಕೆನಾಲ್ ಮೂಲಕ ಪಟ್ಟಣದ ಹುಲ್ಯಾಳ ಕೆರೆ ತುಂಬಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಶಿವನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹುಲ್ಯಾಳ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಹಿರಣ್ಯಕೇಶಿ ನದಿ ನೀರು ಪೋಲಾಗಿ ಹಳ್ಳಕ್ಕೆ ಹರಿದು ಹೋಗುತ್ತಿತ್ತು. ಅದರ ಬದಲಾಗಿ ರಾಯಬಾಗ ಸೇರಿ ನಂದಿಕುರಳಿ, ನಸಲಾಪುರ, ಕೆಂಪಟ್ಟಿ, ಕೆರೂರ, ಖಡಕಲಾಟ ಗ್ರಾಮಗಳ ಕೆನಾಲಗಳಿಗೆ ನೀರು ಹರಿಸುವುದರಿಂದ ರೈತರಿಗೆ ಮತ್ತು ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಕೆನಾಲ್‌ಗಳಲ್ಲಿ ನೀರು ಹರಿವುದರಿಂದ ಅಂತರ್ಜಲಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿ, ಪೋಲಾಗಿ ಹೋಗುತ್ತಿದ್ದ ನೀರನ್ನು ಕೆನಾಲ್ ಮತ್ತು ಕೆರೆಗಳಿಗೆ ಹರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಬಂಡಗರ, ಜ್ಯೋತಿ ಕೆಂಪಟ್ಟಿ, ತಮ್ಮಣ್ಣಿ ನಿಂಗನೂರೆ, ದಿಲೀಪ ಜಮಾದಾರ್, ಅಬ್ದುಲಸತ್ತಾರ್ ಮುಲ್ಲಾ, ಹರೀಶ ಕುಲಗುಡೆ, ವಿವೇಕ ಹಟ್ಟಿಕರ, ಮಾರುತಿ ನಾಯಿಕ, ಅಣ್ಣಾಸಾಹೇಬ ಸಮಾಜೆ, ದಿಲೀಪ್ ಜಮಾದಾರ, ಅರ್ಜುನ ಬಂಡಗರ, ಹಾಜಿ ಮುಲ್ಲಾ, ಫಾರೂಕ್ ಮೋಮಿನ, ಜಿನ್ನಪ್ಪ ಖೆಮಲಾಪುರೆ, ಎಸ್.ಜಿ.ಸಲಗರೆ, ಅಭಿಯಂತ ಎಚ್.ಎಲ್.ಪೂಜಾರಿ ಇತರರು ಇದ್ದರು.