

ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ವ್ಯಾಪ್ತಿಯ ಮ¯್ಲÁಬಾದ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ೨೭ ಕಿ.ಮೀ. ಕಾಮಗಾರಿ ಕಳಪೆ ಆಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿ¯್ಲÁಧ್ಯP್ಷÀ ಮಹಾಂತಗೌಡ ನಂದಿಹಳ್ಳಿ ಆರೋಪಿಸಿದರು.
ಎಂಬಿಸಿ ವಿತರಣೆ ಕಾಲುವೆಯ ಕಾಮಗಾರಿ ಒಟ್ಟು ೫೪ ಕಿ.ಮೀ. ಉದ್ದವಿದೆ. ೭೩ ಕೋಟಿ ರೂ. ನಿಗದಿಪಡಿಸಿದ್ದು, ಅಧಿಕಾರಿಗಳ ಮಾಹಿತಿಯಂತೆ ೨೭ ಕಿ.ಮೀ. ಕಾಲುವೆ ಕಾಮಗಾರಿ ಮುಗಿದಿದ್ದು, ೪೦ ಕೋಟಿ ರೂ. ಖರ್ಚಾಗಿದ್ದು, ಇಡೀ ಕಾಮಗಾರಿ ಕಳಪೆ ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಲ್ಲಬಾದ ಏತ ನೀರಾವರಿ ಯೋಜನೆಯ ಕಾಮಗಾರಿಯೂ ಕಳಪೆ ಆಗಿತ್ತು. ಅದಕ್ಕಿಂತ ಹೆಚ್ಚು ಕೆರೆ ತುಂಬುವ ಯೋಜನೆಯಲ್ಲಿ ಕಳಪೆ ಕಾಮಗಾರಿ ಆಗಿದೆ. ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ಮಾಡುತ್ತಿದ್ದರೂ ಶಾಸಕರು ಕ್ರಮ ಕೈಗೊಳ್ಳುತ್ತಿಲ್ಲ. ಇದು ಶಾಸಕರ ಬಗ್ಗೆ ಪ್ರಶ್ನಿ ಮೂಡಿಸುತ್ತಿದೆ ಎಂದರು.
ಆರ್‌ಟಿಐ ಅರ್ಜಿ ಮೂಲಕ ಕಾಮಗಾರಿಗೆ ಸಂಬAಧಿತ ದಾಖಲೆ ಕೇಳಿದರೆ, ದಾಖಲೆ ನೀಡಲು ೧.೧೦ ಲಕ್ಷ ರೂ. ಡಿಸಿ ಮೂಲಕ ಪಾವತಿಸುವಂತೆ ಕೇಳುತ್ತಿದ್ದಾರೆ. ಇಷ್ಟು ಹಣ ಹೋರಾಟಗಾರರು ಎಲ್ಲಿಂದ ತರಬೇಕು? ಎಂದು ಪ್ರಶ್ನಿಸಿದರು. ಶಾಸಕರು ಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕು. ಜನವರಿ ೨೦ರ ಒಳಗಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳದಿದ್ದರೆ, ಜೇವರ್ಗಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಸುಶೀಲಾ ಪೂಜಾರಿ, ಸೋಮಣ್ಣಗೌಡ ಪಾಟೀಲ್, ಸಂತೋಷ ರಾಠೋಡ, ಕೇಶವ ಚವ್ಹಾಣ್, ಶಾಂತಾಬಾಯಿ ಇದ್ದರು.