ಕೆರೆ ತುಂಬಿಸಲು 229 ಕೋಟಿ ರೂ. ಬಿಡುಗಡೆ

21-99
ಗಡಿಭಾಗದ ಕೆರೆ ತುಂಬುವ ಯೋಜನೆಗೆ ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ರೈತರು ಸಂಬರಗಿಯಲ್ಲಿ ಪಟಾಕಿ ಸಿಡಿ ಸಂಭ್ರಮಿಸಿದರು. ಜಿಪಂ ಮಾಜಿ ಸದಸ್ಯ ದಾದಾ ಶಿಂಧೆ, ಅಶೋಕ ಹಬಗುಂಡೆ, ಸುನೀಲ ಹೊನಕಾಂಡೆ, ಮಲ್ಲೇಶ ಮೇತ್ರಿ ಇತರರಿದ್ದರು.
Published on

ಸಂಬರಗಿ, ಬೆಳಗಾವಿ: ಗಡಿಭಾಗದ 23 ಕೆರೆ ತುಂಬುವ ಯೋಜನೆಗೆ ರಾಜ್ಯ ಸರ್ಕಾರ 229 ಕೋಟಿ ರೂ. ಬಿಡುಗಡೆ ಮಾಡಿರುವುದು ರೈತರಲ್ಲಿ ಸಂತಸ ಮೂಡಿಸಿದೆ ಎಂದು ಜಿಪಂ ಮಾಜಿ ಸದಸ್ಯ ದಾದಾ ಶಿಂಧೆ ತಿಳಿಸಿದರು.

ಕೆರೆ ತುಂಬುವ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ರೈತರು ಪಟಾಕಿ ಸಿಡಿ ಸಂಭ್ರಮಿಸಿದ ನಂತರ ಮಾತನಾಡಿದ ಅವರು, ಶ್ರೀಮಂತ ಪಾಟೀಲ ಶಾಸಕರಾದ ಬಳಿಕ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿದೆ. 23 ಕೆರೆ ತುಂಬುವ ಯೋಜನೆಯಿಂದ ಅನಂತಪುರ, ಮಲಾಬಾದ, ಬಳ್ಳಿಗೇರಿ, ಚಮಕೇರಿ, ಬೇಡರಹಟ್ಟಿ, ಗುಂಡೇವಾಡಿ, ಪಾರ್ಥನಹಳ್ಳಿ, ಬೇವನೂರ ಸೇರಿ ಹಲವು ಗ್ರಾಮಗಳಿಗೆ ಲಾಭವಾಗಲಿದೆ ಎಂದು ತಿಳಿಸಿದರು. ಅನಂತಪುರ ಗ್ರಾಪಂ ಅಧ್ಯಕ್ಷ ಅಶೋಕ ಹಬಗುಂಡೆ, ಸುನೀಲ ಹೊನಕಾಂಡೆ, ಮಲ್ಲೇಶ ಮೇತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net