ಕೆರೆ ತುಂಬಿ ಅನ್ನದಾತರ ಹರ್ಷ, ಶಾಸಕ ಶರತ್‌ಬಚ್ಚೇಗೌಡ ಸಂತಸ, ಗುಂಡೂರು ಕೆರೆಯಲ್ಲಿ ತೆಪ್ಪೋತ್ಸವ

sharath
Published on

ಹೊಸಕೋಟೆ: ಈ ಬಾರಿ ಉತ್ತಮ ಮಳೆಯಿಂದ ಹಲವು ದಶಕಗಳಿಂದ ಭಣಗುಡುತ್ತಿದ್ದ ಅನೇಕ ಕೆರೆಗಳು ತುಂಬಿದ್ದು ತಾಲೂಕಿನ ರೈತರ ಮೊಗದಲ್ಲಿ ಸಂತ ಇಮ್ಮಡಿಸಿದೆ ಇದು ನಮಗೆಲ್ಲ ಸಂಭ್ರಮ ತಂದಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಸಂತಸ ವ್ಯಕ್ತಪಡಿಸಿದರು.

ಅನುಗೊಂಡನಹಳ್ಳಿ ಹೋಬಳಿಯ ಗುಂಡೂರು ಗ್ರಾಮ ಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೆಪ್ಪೋತ್ಸವ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತಮ ಮಳೆ ರೈತರ ಜೀವನಾಡಿಯಾಗಿದ್ದು, ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಾರಣೀಭೂತವಾಗಿದೆ. ರೈತರ ಬದುಕು ಹಸನಾದರೆ ಇಡೀ ದೇಶವೇ ಸುಭಿಕ್ಷವಾಗಿರುತ್ತದೆ ಎಂದು ಹೇಳಿದರು.

ಈ ಬಾರಿಯ ಉತ್ತಮ ಮಳೆಯಿಂದ ತಾಲೂಕಿನಲ್ಲಿ ಹಲವು ಕೆರೆಗಳಲ್ಲಿ ಜಲರಾಶಿ ಕಂಡುಬಂದಿರುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ ಎಂದರು. ಇದರ ಜತೆಗೆ ಎಚ್‌ಎನ್ ವ್ಯಾಲಿ ನೀರು ಹೊಸಕೋಟೆಯ ದೊಡ್ಡಅಮಾನಿ ಕೆರೆಗೆ ಹರಿಯುತ್ತಿರುವುದರಿಂದ ಕೆರೆಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರು ಮಲ್ಲಸಂದ್ರ ಕೆರೆ ಮೂಲಕ ಅನುಗೊಂಡನಹಳ್ಳಿ ಹೋಬಳಿಯ ಹಲವು ಭಾಗಗಳಿಗೆ ಅಂತರ್ಜಲ ವೃದ್ಧಿಯಾಗಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಹೇಳಿದರು.

ಮುಖಂಡರಾದ ಕೃಷ್ಣಾರೆಡ್ಡಿ, ಭೋದನಹೊಸಹಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಬಾಬು ರೆಡ್ಡಿ, ಗುಂಡೂರು ನಾರಾಯಣಸ್ವಾಮಿ, ಲಕ್ಷ್ಮಿ ನಾರಾಯಣಸ್ವಾಮಿ ಜತೆಗೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net