ಕೆರೆ ಕಾಮಗಾರಿಗೆ 75 ಲಕ್ಷ ರೂ. ಬಿಡುಗಡೆ

17-ANG-1 MLA
Published on

ಅಣ್ಣಿಗೇರಿ: ಪಟ್ಟಣದ ಕುಡಿಯುವ ನೀರಿನ ಕೆರೆಯ ಮೊದಲ ಹಂತದ ಕಾಮಗಾರಿಗೆ 75 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಕಳಪೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಪಟ್ಟಣದ ಕೆರೆಯ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ನಿರ್ವಿುಸಿದ ಉದ್ಯಾನವನ್ನು ಶಾಸಕರು ವೀಕ್ಷಿಸಿದರು. ‘ತಾಲೂಕಿನಲ್ಲಿ ಪ್ರಥಮ ಬಾರಿಗೆ ಒಂದು ಪೊಲೀಸ್ ಠಾಣೆಯಲ್ಲಿ ಇಂತಹ ಉತ್ತಮ ಕಾರ್ಯ ಆಗಿರುವುದು ಸಂತೋಷದ ಸಂಗತಿ. ಜಿಲ್ಲೆಯ ಇತರ ಠಾಣೆಗಳಲ್ಲಿ ಇಂಥ ಕಾರ್ಯಗಳು ಹೆಚ್ಚು ನಡೆದರೆ ಇತರರಿಗೆ ಮಾದರಿಯಾಗುತ್ತದೆ. ಪಿಎಸ್​ಐ ಜೋಲಿಕಟ್ಟಿ ಅವರ ಕಾರ್ಯಕ್ಕೆ ಸಹಕರಿಸಿದ ಠಾಣೆಯ ಸಿಬ್ಬಂದಿ ಮತ್ತು ಊರಿನ ಗುರು- ಹಿರಿಯರ ಕಾರ್ಯ ಶ್ಲಾಘನೀಯ ಎಂದರು.

ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ, ಕೆ.ಎಫ್. ಕಟಗೆ, ಬಸವರಾಜ ಯಳವತ್ತಿ, ನಿಂಗಪ್ಪ ದಳವಾಯಿ, ರಾಘವೇಂದ್ರ ರಾಮಗಿರಿ, ಕೃಷ್ಣ ಭಜಂತ್ರಿ, ರವಿ ಬೆಳಹಾರ, ಮುತ್ತು ನಾಗಾವಿಮಠ, ಶಿವು ಹಳದೋಟರ, ಈರಣ್ಣ ಗುರಿಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net