ಕೆರೆ-ಕಟ್ಟೆ ನಿರ್ಮಿಸಿದ ಪರಿಸರ ಪ್ರೇಮಿ

14 KAMPLI 02
Published on

ಕಂಪ್ಲಿ: ಸಿದ್ಧರಾಮೇಶ್ವರರು ಸಕಲ ಜೀವಿಗಳ ಆಧಾರಕ್ಕಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿ ಪರಿಸರ ಪ್ರೇಮಿಯಾಗಿದ್ದಾರೆ ಎಂದು ತಾಲೂಕು ಭೋವಿ ಸಂಘದ ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಹೇಳಿದರು.

ತಾಲೂಕು ಕಚೇರಿಯಲ್ಲಿ ಮಂಗಳವಾರ ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಿದ್ಧರಾಮೇಶ್ವರ ಅವರ ವಚನಗಳಲ್ಲಿ ಧಾರ್ಮಿಕ, ಸಾಮಾಜಿಕ ಕಳಕಳಿ ಹೆಚ್ಚಿದೆ. ಸಿದ್ಧರಾಮೇಶ್ವರರ ಕಾಯಕ ನಿಷ್ಠೆ ಸರ್ವರೂ ಅನುಕರಣೀಯ ಎಂದರು. ಭೋವಿ ಸಂಘದ ಗೌರವಾಧ್ಯಕ್ಷ ಎ.ವಿ.ಗೋವಿಂದರಾಜು ಮಾತನಾಡಿ, ಸಮುದಾಯ ಭವನಕ್ಕೆ ಶಾಸಕರು ಅನುದಾನ ಬಿಡುಗಡೆಗೊಳಿಸಬೇಕು. ಪಟ್ಟಣದ ವೃತ್ತ, ರಸ್ತೆಗಳಿಗೆ ಸಿದ್ಧರಾಮೇಶ್ವರ ಅವರ ಹೆಸರಿಡಬೇಕು. ಶಾಲೆ-ಕಾಲೇಜು ಸೇರಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಜಯಂತಿ ಜರುಗಿಸಬೇಕು ಎಂದು ಒತ್ತಾಯಿಸಿದರು.

ಭೋವಿ ಸಂಘದ ಕಚೇರಿಯಲ್ಲಿಯೂ ಜಯಂತ್ಯುತ್ಸವ ಜರುಗಿತು. ತಹಸೀಲ್ದಾರ್ ಶಿವರಾಜ, ಸಂಘದ ಪದಾಧಿಕಾರಿಗಳಾದ ಎಂ.ಹುಲುಗಪ್ಪ, ವೆಂಕಟರಮಣ, ವಿ.ಗುರ‌್ರಪ್ಪ, ವಿ.ಸತ್ಯಪ್ಪ, ವಿ.ಬಿ.ನಾಗರಾಜ, ಎಸ್.ವಿ.ಗೋವಿಂದರಾಜ, ಮೌನೇಶ್, ತಿಪ್ಪೇಸ್ವಾಮಿ, ಬಂಡಿ ತಿಮ್ಮಪ್ಪ, ಸತೀಶ್, ಗ್ರೇಡ್-2ತಹಸೀಲ್ದಾರ್ ಎಂ.ಆರ್.ಷಣ್ಮುಖ ನಾನಾ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net