

ಬೆಟ್ಟದಪುರ: ಸಮೀಪದ ಕೊಣಸೂರು ಗ್ರಾಮದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೆಲುವಯ್ಯನಕಟ್ಟೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಸಂಸ್ಥೆಯ ವಲಯ ಯೋಜನಾಧಿಕಾರಿ ಸಂತೋಷ್ ಮಾತನಾಡಿ, ನಮ್ಮ ಊರು-ನಮ್ಮ ಕೆರೆ ಎಂಬ ವಿಶೇಷ ಕಾರ್ಯಕ್ರಮದಡಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆ ಬಾರುವುದಿಲ್ಲ. ರೈತರು ಹಾಗೂ ಸಾರ್ವಜನಿಕರು ಕೆರೆಕಟ್ಟೆಗಳನ್ನು ಸಂರಕ್ಷಿಸುವ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸದಾಶಿವ, ಪ್ರಭು, ಮಂಜುನಾಥ, ರವಿ, ಗ್ರಾಮಸ್ಥರಾದ ಯೋಗೇಶ, ರಾಜಶೇಖರಯ್ಯ, ಆನಂದ, ಸತೀಶ, ರುದ್ರಾಣಿ ಸೇರಿದಂತೆ ಸಿಬ್ಬಂದಿಗಳು ಇದ್ದರು.