

ಹಾಸನ: ನಗರದ ಹೊರವಲಯದ ಎಂ.ಸಿ.ಎಫ್ ವಸತಿ ಗೃಹದಲ್ಲಿ ನೀರಿನ ಟ್ಯಾಂಕನ್ನು ಆಸೀಡ್ ಬಳಸಿ ತೊಳೆದು ತ್ಯಾಜ್ಯ ಕೆಮಿಕಲ್ ನೀರು ಚರಂಡಿ ಮೂಲಕ ಹರಳಹಳ್ಳಿ ಕೆರೆಗೆ ಹರಿದ ಪರಿಣಾಮ ನೂರಾರು ಮೀನುಗಳು ಸೇರಿ ಇತರೆ ಜಲಚರಗಳು ಮೃತಪಟ್ಟಿವೆ.
ಹಸಿರುಭೂಮಿ ಪ್ರತಿಷ್ಠಾನದ ಸದಸ್ಯ ಹೆಚ್.ಕೆ.ನಾಗೇಶ್ ಮಾತನಾಡಿ, ಎಂ.ಸಿ.ಎಫ್ ವಸತಿ ಗೃಹದ ಮನೆಗಳ ಮೇಲೆ ಇರುವ ನೀರಿನ ಟ್ಯಾಂಕ್‌ಗಳನ್ನು ಒಂದು ವಾರದ ಹಿಂದೆ ಆಸೀಡ್ ವಾಶ್ ಮಾಡಿ, ಕೆಮಿಕಲ್ ನೀರನ್ನು ಚರಂಡಿ ಮೂಲಕ ನೇರವಾಗಿ ಕೆರೆಗೆ ಹರಿ ಬಿಡಲಾಗಿದೆ. ಇದರಿಂದ ಕೆರೆಯಲ್ಲಿದ್ದ ಮೀನುಗಳು ಸಾವನಪ್ಪಿವೆ. ಈ ಕೆರೆಯ ನೀರನ್ನು ದನಕರುಗಳು ಕುಡಿಯುವುದರಿಂದ ಹೆಚ್ಚಿನ ಅಪಾಯವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರಿಗೆ ಉಪಯೋಗವಾಗಲೆಂದು ಹಸಿರುಭೂಮಿ ಪ್ರತಿಷ್ಠಾನದಿಂದ ಹಣ ಸಂಗ್ರಹಿಸಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಆದರೆ, ತ್ಯಾಜ್ಯ ಹಾಗು ಕೆಮಿಕಲ್ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ಅಪಾಯ ಎದುರಾಗಿತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಕೆಮಿಕಲ್ ಹಾಗು ತ್ಯಾಜ್ಯ ಕೆರೆಗೆ ನೇರವಾಗಿ ಬಿಡುವುದನ್ನು ತೆಡೆಯಬೇಕು ಎಂದು ಮನವಿ ಮಾಡಿದ್ದಾರೆ.