ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲವಾಲ್ ಬುಟ್ಟೋ ಹೇಳಿಕೆ ಖಂಡಿಸಿ ಪ್ರತಿಭಟನೆ

ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲವಾಲ್ ಬುಟ್ಟೋ ಹೇಳಿಕೆ ಖಂಡಿಸಿ ಪ್ರತಿಭಟನೆ
Published on

ಆಲೂರು : ಉಗ್ರನ ಪರ ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲವಾಲ್ ಬುಟ್ಟೋ ಹೇಳಿಕೆಯನ್ನು ಖಂಡಿಸಿ ಆಲೂರು ಪಟ್ಟಣದ ತಾಲ್ಲೂಕು ಕಛೇರಿ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿ ತಾಲೂಕು ತಹಸೀಲ್ದಾರ್ ಸೌಮ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್ ಮಾತನಾಡಿ ಮುಸ್ಲಿಂ ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೇ, ಉಗ್ರಗಾಮಿಗಳನ್ನೂ ಸಹೋದರ ಸಂಬಂದಿಗಳಂತೆ ನೋಡುತ್ತಾರೆ.ರಾಹುಲ್ ಗಾಂಧಿ ಯನ್ನು ಖುಷಿಪಡಿಸಲು ಈಗ ಡಿ.ಕೆ.ಶಿವಕುಮಾರ್ ಉಗರ ಗ್ರಾಮಿಗೇ ಕ್ಲೀನ್ ಚಿಟ್ ಕೊಡುತ್ತಿದ್ದಾರೆ ಎಂದರಲ್ಲದೇ

ಪ್ರಧಾನಿ ಮೋದಿ ನಾಯಕ ಅಂತಾ ಇಡೀ ವಿಶ್ವವೇ ಒಪ್ಪಿದೆ. ಪಾಕ್​ ಸಚಿವ ಬಿಲಾವಲ್ ಭುಟ್ಟೋ ಮೋದಿಗೆ ಕ್ಷಮೆ ಕೇಳಬೇಕು. ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನವನ್ನು ಅಳಸಿ ಹಾಕುವ ಕಾಲ ದೂರವಿಲ್ಲ ಈ ಮೂಲಕ ಅಖಂಡ ಭಾರತ ನಿರ್ಮಾಣ ಆಗುತ್ತದೆ. ಭಯೋತ್ಪಾದನಾ ಚಟುವಟಿಕೆಗೆ ಪಾಕ್​ ನಿರಂತರ ಕುಮ್ಮಕ್ಕು ನೀಡುತ್ತಿದೆ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ದೇಶಕ್ಕೆ ಇದೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಕುಕ್ಕರ್ ಬಾಂಬ್ ಸ್ಪೋಟಿಸಿದ ಭಯೋತ್ಪಾದಕ ತಾರಿಕ್ ಅನ್ನು ಬೆಂಬಲಿಸಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾನಸಿಕ ಸ್ಥಿತಿ ಮಿತಿ ಕಳೆದುಕೊಂಡಿದ್ದಾರೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಡಿಕೆಶಿಯವರನ್ನು ಪಕ್ಷದಿಂದ ವಜಾ ಮಾಡಬೇಕು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾಗತಿಕ ಭಯೋತ್ಪಾದಕ ಹೊಸಮ ಬಿನ್ ಲಾಡನ್ ಗೆ ಹೋಲಿಸಿದ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾಬಾಲ್ ಬುಟ್ಟೋರಿಂದ ಭಾರತೀಯರು ಪಾಠ ಕಲಿಯಬೇಕಾಗಿಲ್ಲ ಕತ್ತೆ,ಕುರಿ, ಕೋಳಿ ಮಾರಿ ಜೀವಿಸುವ ಪಾಕಿಸ್ತಾನದವರಿಗೆ ನಮ್ಮ ದೇಶದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ  ಉಪಾಧ್ಯಕ್ಷ ಪೂವಯ್ಯ,ಜಿಲ್ಲಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಅನೂಪ್ ಜಯರಾಜ್,ಬಿಜೆಪಿ ಹಿರಿಯ ಮುಖಂಡ ಎ.ಹೆಚ್.ರಮೇಶ್,ಲೋಕೇಶ್ ಕದಾಳು,ಹೇಮಂತ್,ಧರ್ಮರಾಜ್,ನಾಗರಾಜ್, ಗಣೇಶ್,ರುದ್ರೇಗೌಡ,ಸೇರಿದಂತೆ ಹಲವು ಮುಖಂಡರು  ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net