ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರ ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರ  ಪ್ರತಿಭಟನೆ
Published on

ಅರಸೀಕೆರೆ: ಕುಕ್ಕರ್ ಬಾಂಬ್ ಸ್ಪೋಟ ಕುರಿತು ಲಘುವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್ ಮಾತನಾಡಿ, ಒಂದು ಕೋಮಿನವರ ಮತ ಸೆಳೆಯುವ ದುರುದ್ದೇಶದಿಂದ ಸ್ಫೋಟದ ಬಗ್ಗೆ ಶಿವಕುಮಾರ್ ಲಘುವಾಗಿ ಮಾತನಾಡಿದ್ದಾರೆ.ದೇಶದ ಭದ್ರತೆ ಹಾಗ ಐಕ್ಯತೆ ದೃಷ್ಟಿಯಿಂದ ಇಂತಹ ಹೇಳಿಕೆ ಸರಿಯಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.


ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಮಾತನಾಡಿ, ಸರ್ವಜನಾಂಗದ ತೋಟದಂತಿರುವ ದೇಶದ ಸಮಗ್ರತೆ ಹಾಳುಮಾಡುವ ಬಹಿರಂಗ ಹೇಳಿಕೆ ಯಾರಿಗೂ ಶೋಭೆ ತರುವುದಲ್ಲ. ಉಗ್ರವಾದಿ ಮನಸ್ಥಿತಿಯ ವ್ಯಕ್ತಿಯಿಂದ ಮಾತ್ರವೇ ಇದನ್ನು ನಿರೀಕ್ಷಿಸಬಹುದಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಗರ ಯೋಜನಾ ಪ್ರಾಧಿಕಾರದ ಕಾಟಿಕೆರೆ ಪ್ರಸನ್ನಕುಮಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಮನೋಜ್ ಕುಮಾರ್, ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್, ನಗರಾಧ್ಯಕ್ಷ ಪುರುಷೋತ್ತಮ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಣ್ಣಾಯ್ಕನಹಳ್ಳಿ ವಿಜಯಕುಮಾರ್,ಒಬಿಸಿ ಅಧ್ಯಕ್ಷ ದಿನೇಶ್,ತಾಪಂ ಮಾಜಿ ಸದಸ್ಯ ಬಾಣಾವರ ಜಯಣ್ಣ,ಅಶೋಕ್. ಚೇತನ್‌ಜೈನ್, ಮುರಳಿ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net