ಕೆಪಿಆರ್‌ನಿಂದ ನಿಯಮ ಉಲ್ಲಂಘನೆ

dharmu sahu
Published on

ಕಲಬುರಗಿ: ಅಫಜಲಪುರ ತಾಲೂಕಿನಲ್ಲಿರುವ ಕೆಪಿಆರ್ ಸಕ್ಕರೆ ಕಾರ್ಖಾನೆಯೂ ತನ್ನ ವ್ಯಾಪ್ತಿಯಲ್ಲಿ ಇಲ್ಲದ ಗ್ರಾಮಗಳಲ್ಲಿನ ಕಬ್ಬು ಎತ್ತುವಳಿ ಮಾಡಿ ನಿಯಮ ಉಲ್ಲಂಘಿಸಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ, ಎನ್‌ಎಸ್‌ಎಲ್ ಕಾರ್ಖಾನೆ ನಿರ್ದೇಶಕ ಧರ್ಮರಾಜ ಸಾಹು ಆರೋಪಿಸಿದರು.

ಕಾನೂನು ಬಾಹಿರವಾಗಿ ಆಳಂದ ತಾಲೂಕಿನಲ್ಲಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಆಳಂದ, ಕಲಬುರಗಿ, ಅಫಜಲಪುರ ತಾಲೂಕಿನ ಕಬ್ಬು ಎತ್ತುವಳಿ ಮಾಡುತ್ತಿದೆ. ಕಬ್ಬು ನುರಿಸುವ ಬಗ್ಗೆ ಕೆಪಿಆರ್ ಕಾರ್ಖಾನೆ ಕಾರ್ಯವ್ಯಾಪಿ ಅನುಮತಿ ಪಡೆದಿರುವುದಿಲ್ಲ. ಈ ಕುರಿತು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಪಿಆರ್ ಕಾರ್ಖಾನೆಯಿಂದ ಎನ್‌ಎಸ್‌ಎಲ್ ಕಾರ್ಖಾನೆ ವ್ಯಾಪ್ತಿಯ ಹಳ್ಳಿಗಳಲ್ಲಿ ಕಬ್ಬು ಎತ್ತುವಳಿ ಮಾಡುವುದು ನಿಲ್ಲಿಸಬೇಕು, ಪರವಾನಗಿ ಪಡೆಯದೇ ನಡೆಸುತ್ತಿದ್ದು, ರೈತರಲ್ಲಿ ಆತಂಕದಲ್ಲಿದ್ದಾರೆ. ಕೂಡಲೇ ಕೆಪಿಆರ್ ವಾಹನಗಳಿಗೆ ಸರ್ಕಾರ ನಾಕಾಬಂಧಿ ಮಾಡಬೇಕು ಎಂದು ಆಗ್ರಹಿಸಿದರು.

ಕೆಪಿಆರ್ ಕಾನೂನು ಬಾಹಿರವಾಗಿ ಜೇವರ್ಗಿ, ಚಿತ್ತಾಪುರ, ಸೇಡಂ, ಕಲಬುರಗಿ ತಾಲೂಕುಗಳಲ್ಲಿ, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ಕಬ್ಬು ನುರಿಸುತ್ತಿದೆ. ರೈತರಲ್ಲಿ ಗೊಂದಲ ಮೂಡಿಸುತ್ತಿರುವ, ಭರವಸೆ ಇಲ್ಲದ ಕೆಪಿಆರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net