ಕೆಟ್ಟಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆ ಸಿಟಿ ಸ್ಕಾೃನ್ರೋಗಿಗಳ ಪರದಾಟ,

CTD 28 C.T.SCANNNNN--0001
Published on

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಸಿಟಿ ಸ್ಕಾೃನ್ ಕಳೆದ 15 ದಿನಗಳಿಂದ ಕೆಟ್ಟು ರೋಗಿಗಳು ಪರದಾಡುತ್ತಿದ್ದರೂ, ಆಸ್ಪತ್ರೆ ಆಡಳಿತ ವರ್ಗ ಅದರ ದುರಸ್ತಿಗೆ ತಲೆ ಕೆಡಿಸಿಕೊಂಡಿಲ್ಲ ಎಂಬ ದೂರು ಕೇಳಿ ಬಂದಿದೆ.
ಬಡ ರೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಸಿ.ಟಿ. ಸ್ಕಾೃನ್ ಹಾಳಾಗಿ ಹಲವು ದಿನಗಳಾದರೂ ದುರಸ್ತಿಗೆ ಯಾಕೆ ಕ್ರಮ ವಹಿಸಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ.
ಖಾಸಗಿ ಕಂಪನಿ ಜತೆ ಯಂತ್ರದ ವಾರ್ಷಿಕ ನಿರ್ವಹಣೆ ಒಪ್ಪಂದದೊಂದಿಗೆ 2012ರಲ್ಲಿ ಸ್ಥಾಪಿಸಿದ ಸಿಟಿ ಸ್ಕಾೃನ್ 2017ರವರೆಗೂ ನಾನಾ ಕಾರಣಗಳಿಂದ ಸಮರ್ಪಕವಾಗಿ ಬಳಕೆಯಾಗಿರಲಿಲ್ಲ.
ನಂತರ ಪ್ರತಿ ದಿನ 35-40 ರೋಗಿಗಳ ಸ್ಕಾೃನಿಂಗ್ ನಡೆಯುತ್ತಿದ್ದು, ಮಾಸಿಕ 400ಕ್ಕೂ ಹೆಚ್ಚು ರೋಗಿಗಳು ಕಡಿಮೆ ವೆಚ್ಚದಲ್ಲಿ ಈ ಯಂತ್ರದ ಪ್ರಯೋಜನ ಪಡೆಯುತ್ತಿದ್ದರು.
ಈಗ ಇದು ಕೆಟ್ಟಿರುವುದರಿಂದ ರೋಗಿಗಳು ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಶುಲ್ಕ ಕೊಟ್ಟು ಸ್ಕಾೃನಿಂಗ್ ಮಾಡಿಸಿಕೊಳ್ಳಬೇಕಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಲ್ಯಾಬ್‌ಗಳ ಸ್ಕಾೃನಿಂಗ್ ಶುಲ್ಕದಲ್ಲಿ ಶೇ.50 ಕ್ಕಿಂತ ಅಧಿಕ ಪ್ರಮಾಣದಲ್ಲಿ ವ್ಯತ್ಯಾಸವಿದೆ. ದುಬಾರಿ ಶುಲ್ಕ ಭರಿಸಲು ರೋಗಿಗಳು ಹೈರಾಣಾಗುತ್ತಿದ್ದಾರೆ.
ಯಂತ್ರ ಕನಿಷ್ಠ 13 ವರ್ಷ ಹಳೆಯದಾಗಿದೆ. ಹೊಸದನ್ನು ಅಳವಡಿಸಬೇಕೆಂಬ ಬೇಡಿಕೆ ಕೂಡ ಇದೆ. ಆದರೆ, ಹೊಸದನ್ನು ಪಿಪಿಪಿ ಮಾದರಿ ಅಳವಡಿಸಬೇಕಿದೆ. ಅದಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಆದರೆ, ಸದ್ಯಕ್ಕೆ ಮಾದರಿ ನೀತಿ ಸಂಹಿತೆಯ ತೊಡಕಿದೆ.
ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ: ನಿತ್ಯ ಸಾವಿರಾರು ಜನ ಬರುವಂಥ ಜಿಲ್ಲಾಸ್ಪತ್ರೆ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಿಂದ ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್‌ಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ.

ಕೋಟ್
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕಾೃನ್ ದುರಸ್ತಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಾಗುವುದು. ಅಲ್ಲಿಯ ಇನ್ನಿತರ ಸಮಸ್ಯೆಗಳ ಕುರಿತಂತೆ ಶೀಘ್ರ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ.
ಟಿ.ಕೆ. ಅನಿಲ್‌ಕುಮಾರ್,ಪ್ರಧಾನ ಕಾರ್ಯದರ್ಶಿ ಆರೋಗ್ಯ ಇಲಾಖೆ, ಬೆಂಗಳೂರು.

ಕೋಟ್

ಒಂದು ವಾರದ ಹಿಂದೆ ಸಿಡಿಲಿನಿಂದ ಸಿಟಿಸ್ಕಾೃನ್ ಕೆಟ್ಟಿದೆ, ಇಂಜಿನಿಯರ್‌ಗಳು ತಪಾಸಣೆ ಮಾಡಿದ್ದಾರೆ. ಅಗತ್ಯವಿರುವ ಬಿಡಿಭಾಗಗಳನ್ನು ಮುಂಬಯಿನಿಂದ ತರಿಸಲು ಆರ್ಡರ್ ಕೊಡಲಾಗಿದೆ. ಮೂರ‌್ನಾಲ್ಕು ದಿನದೊಳಗೆ ಸರಿಯಾಗಲಿದೆ.
ಎಸ್.ಪಿ. ರವೀಂದ್ರ, ಜಿಲ್ಲಾ ಸರ್ಜನ್, ಚಿತ್ರದುರ್ಗ.

ವಿಜಯವಾಣಿ ವರದಿ ಫಲಶೃತಿ
ಸಿಟಿ ಸ್ಕ್ಯಾನ್‌ಗೆ ಪರ್ಯಾಯ ವ್ಯವಸ್ಥೆ
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ಯಂತ್ರ, ಸಿಡಿಲಿನ ಆಘಾತದಿಂದ ದುರಸ್ತಿಯಲ್ಲಿದೆ. ಆದ್ದರಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಿಟಿ ಸ್ಕಾೃನ್‌ಗೆ ನಗರದ ತುರುನೂರು ರಸ್ತೆ ಫೋರ್ಟ್ ಸಿಟಿ ಡಯೋಗ್ನಾಸ್ಟಿಕ್ ಸೆಂಟರ್, ಬೇಸ್‌ಮೆಂಟ್ ಆಫ್ ಸಿಎಂಎಚ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಎಸ್ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.
ಸರ್ಕಾರದ ನಿಗದಿತ ಶುಲ್ಕದಂತೆ ಸ್ಕ್ಯಾನ್ ಮಾಡಲಾಗುತ್ತದೆ. ಎಬಿ-ಎಆರ್‌ಕೆ ಅಡಿ ನೋಂದಣಿಯಾದ ರೋಗಿಗಳಿಗೆ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಜಿಲ್ಲಾಸ್ಪತ್ರೆಯ ಸಿಟಿ ಸ್ಕಾೃನ್ ಯಂತ್ರ ಕೆಟ್ಟಿದ್ದು, ರೋಗಿಗಳು ಹೈರಾಣಾಗುತ್ತಿದ್ದಾರೆ ಎಂಬ ವರದಿಯನ್ನು ವಿಜಯವಾಣಿ ಬುಧವಾರ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತ ಆಸ್ಪತ್ರೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net