

ಅಳವಂಡಿ: ಮನುಷ್ಯ ಸರ್ವರೊಂದಿಗೆ ಬೆರೆತು ಜೀವಿಸಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಹಾಗೂ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಇದು ಜೀವನವನ್ನು ಸಾರ್ಥಕಗೊಳಿಸಲಿದೆ ಎಂದು ಕುಕನೂರು ಶ್ರೀ ಅನ್ನದಾನೇಶ್ವರ ಮಠದ ಶ್ರೀಮಹಾದೇವ ಸ್ವಾಮೀಜಿ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದಲ್ಲಿ ನಡೆದ ಭಕ್ತಿ ಹಿತಚಿಂತನಾ ಸಭೆ ಉದ್ದೇಶಿಸಿ ಇತ್ತೀಚೆಗೆ ಮಾತನಾಡಿದರು. ಹಣ ಇದ್ದರೂ ಶಾಂತಿ, ಸಮಾಧಾನ ಗುಣದ ಜತೆಗೆ ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ ಜೀವನ ಸಾರ್ಥಕವಾಗಲಿದೆ. ಕೆಟ್ಟ ವಿಚಾರಗಳು ಬದುಕು ಮತ್ತು ಮನಸ್ಸನ್ನು ದುರ್ಬಲಗೊಳಿಸುತ್ತವೆ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳ್ಳುವುದರಿಂದ ಎಲ್ಲರಲ್ಲೂ ಒಂದೇ ಎಂಬ ಭಾವ ಮೂಡಲಿದೆ ಎಂದರು.
ಪ್ರಮುಖರಾದ ಶಂಕ್ರಪ್ಪ ಬಡಿಗೇರ, ಗುರುಬಸಯ್ಯ ಬ್ರಹನ್ಮಠ, ಬಸವರಾಜ ನಾಗರಡ್ಡಿ, ಮುತ್ತಯ್ಯ ಹಿರೇಮಠ, ಪ್ರಭು, ಸೋಮಪ್ಪ, ಚಿದಾನಂದಪ್ಪ, ರಾಜೇಂದ್ರಪ್ಪ ಎಳುಕೋಟೇಶ, ಶಂಕ್ರಪ್ಪ, ವೀರಪ್ಪ, ವಿರೂಪಾಕ್ಷಪ್ಪ, ಕಾಶಯ್ಯ, ಯಮನೂರಪ್ಪ, ಮಲ್ಲಪ್ಪ, ಬಸಪ್ಪ, ಅನ್ನಪೂರ್ಣಮ್ಮ, ಲಕ್ಷ್ಮವ್ವ, ಬಸವಣ್ಣೆಮ್ಮ, ವೀರಮ್ಮ, ಶೇಖರಪ್ಪ ಇತರರಿದ್ದರು.