ಕೆಜಿಬಿ ಕನೆಕ್ಟ್ ಹೊಸ ಆ್ಯಪ್ ಬಿಡುಗಡೆ

30Rajesh5
Published on

ಚಾಮರಾಜನಗರ: ಗ್ರಾಹಕರ ಅನುಕೂಲಕ್ಕಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆಜಿಬಿ ಕನೆಕ್ಟೃ್ ಎಂಬ ಹೊಸ ಆ್ಯಪ್ ಪರಿಚಯಿಸಿದೆ.

ಆ್ಯಪ್‌ನಲ್ಲಿ 125ಕ್ಕೂ ಹೆಚ್ಚು ಸೇವೆಗಳು ಲಭ್ಯವಿವೆ. ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ಸೇವೆಗಳ ಸೌಲಭ್ಯ ಪಡೆಯಬಹುದು. ಇದನ್ನು ಹಣ ವರ್ಗಾವಣೆ, ಸಾಲಗಳ ಮರು ಪಾವತಿ, ಎಫ್‌ಡಿ, ಆರ್‌ಡಿ ಠೇವಣಿ ಖಾತೆ ತೆರೆಯಲು ಬಳಸಬಹುದು ಎಂದು ಬ್ಯಾಂಕ್ ತಿಳಿಸಿದೆ.

ಬಿಲ್‌ಗಳ ಪಾವತಿ, ಶಾಪಿಂಗ್ ಮತ್ತು ಇನ್ನೂ ಹೆಚ್ಚಿನ ಸೇವೆಗಳು ಈ ಆ್ಯಪ್‌ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಶಾಖೆಯನ್ನು ಸಂಪರ್ಕಿಸಲು ಬ್ಯಾಂಕ್ ಕೋರಿದೆ. ಇದು ನಮ್ಮ ಗ್ರಾಹಕರಿಗೆ ಭದ್ರತೆಯ ಜತೆಗೆ ನವೀನ ಅನುಭವ ಒದಗಿಸುತ್ತದೆ. ಗ್ರಾಹಕರಿಗೆ ಆಧುನಿಕ, ಸುಲಭ ಹಾಗೂ ಸುರಕ್ಷಿತ ಬ್ಯಾಂಕಿಂಗ್ ಅನುಭವ ಕಲ್ಪಿಸಿಕೊಡುವುದು ನೂತನ ಆ್ಯಪ್ ಅಭಿವೃದ್ಧಿಪಡಿಸುವ ಹಿಂದಿನ ಪ್ರಮುಖ ಉದ್ದೇಶವಾಗಿದೆ. ನೇರ ಹಣ ವರ್ಗಾವಣೆ, ಬಿಲ್ ಪಾವತಿ, ಎಟಿಎಂ ಅಥವಾ ಶಾಖೆಗಳ ಮಾಹಿತಿ ಸೇರಿ ನಾನಾ ರೀತಿಯ 125ಕ್ಕೂ ಹೆಚ್ಚು ಬ್ಯಾಂಕ್ ಸೇವೆಗಳನ್ನು ಗ್ರಾಹಕರು ಈ ಆ್ಯಪ್‌ನಲ್ಲಿ ಅತ್ಯಂತ ಸುಲಭವಾಗಿ ಪಡೆಯಬಹುದಾಗಿದೆ ಎಂದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಕಿ ಎಚ್.ಎಸ್.ತಿವೇಣಿ, ಹಿರಿಯ ವ್ಯವಸ್ಥಾಪಕ ಸಿ.ಎಲ್.ಪುನೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net