

ಕಲಬುರಗಿ: ಡಿಗ್ರಿ ಮುಗಿಸಿರುವ ವಿದ್ಯಾರ್ಥಿಗಳು ಐಟಿ ಮತ್ತು ನೆಟ್‌ವರ್ಕಿಂಗ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣ ಪತ್ರ ವೃತ್ತಿ ತರಬೇತಿಯನ್ನು ನಗರದ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಯಲ್ಲಿಆರಂಭಿಸಲಾಗಿದೆ ಎಂದು ಸಂಸ್ಥೆ ಉಪ ನಿರ್ದೇಶಕ ಪ್ರಶಾಂತ ಹರನೂರು ಹೇಳಿದರು.
ಬಿಕಾಂ, ಬಿ.ಎ.ಪದವೀಧರರಿಗೆ ಐಟಿ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉತ್ತಮ ಅವಕಾಶವಾಗಿದೆ. ಕೆಜಿಟಿಟಿಐ ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹೊಸ ಕೋರ್ಸ್ ಆರಂಭಿಸಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳು ಸೆ.೨೬ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಟಿ ಮತ್ತು ನೆಟ್‌ವರ್ಕಿಂಗ್ ತರಬೇತಿ ಹೊಂದಿದವರು ನೆಟ್‌ವರ್ಕ್, ಅಡ್ಮಿನಿಸ್ಪೆçÃಟರ್ಸ್, ನೆಟ್‌ವರ್ಕ್ ಸಪೋರ್ಟ್ ಸ್ಪೆಷಲಿಸ್ವ್, ನೆಟ್ವರ್ಕ್ ಇಂಜಿನಿಯರ್, ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಮತ್ತು ಕ್ಲೌಡ್ ಸ್ಪೆಷಲಿಸ್ವ್ ಹುz್ದÉ ಪಡೆಯಬಹುದಾಗಿದೆ. ಕೋರ್ಸ್ಗೆ ಪದವಿಯಲ್ಲಿ ಸಾಮಾನ್ಯ ಕನಿಷ್ಠ ಶೇ.೫೦, ಎಸ್‌ಸಿ, ಎಸ್‌ಟಿ, ಒಬಿಸಿ ಶೇ.೪೫ ಅಂಕ ಪಡೆದು ಉತ್ತೀರ್ಣರಾಗಿರಬೇಕು ಎಂದು ಹೇಳಿದರು.
ಮಾಹಿತಿಗೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹತ್ತಿರ, ಬಿಇಒ ಕಚೇರಿ ಹಿಂದೆ, ರಾಜಾಪುರ ರಸ್ತೆ, (ಕೆಜಿಟಿಟಿಐ) ಕ್ಕೆ ಭೇಟಿ ನೀಡಬಹುದು. ೯೦೭೧೪೨೩೦೦೪, ೯೯೧೬೮೫೪೧೮೭, ೦೮೪೭೨-೨೫೨೧೧೧ ಸಂಪರ್ಕಿಸಬಹುದು ಎಂದು ತಿಳಿಸಿದರು.