

ಪಾ.ಶ್ರೀ.ಅನಂತರಾಮ್ ಕೋಲಾರ
ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ದೇಶ&ವಿದೇಶಗಳಲ್ಲಿ ಸೂಪರ್ ಹಿಟ್ ಆಗಿರುವ ಕೆಜಿಎಫ್ ಚಾಪ್ಟರ್&2 ಸಿನಿಮಾದ ಚಿತ್ರೀಕರಣ ನಡೆದಿರುವ ಕೋಲಾರ ಚಿನ್ನದ ಗಣಿ ಪ್ರದೇಶ (ಕೆಜಿಎಫ್) ಇದೀಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
ಕೆಜಿಎಫ್ ಚಾಪ್ಟರ್&1 ಚಿತ್ರೀಕರಣಕ್ಕೆ ಅವಕಾಶ ನೀಡದಂತೆ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗಿ ಚಿತ್ರ ಲೋಕಾರ್ಪಣೆಗೊಂಡ ಬಳಿಕ ಕೆಜಿಎಫ್ ಪ್ರವಾಸಿಗರ ತಾಣವಾಗಿದೆ. ಪ್ರವಾಸಿಗರು ಕೆಜಿಎಫ್ನತ್ತ ಮುಖ ಮಾಡುತ್ತಿರುವುದರಿಂದ ಇಲ್ಲಿನ ಹೋಟೆಲ್ಗಳಿಗೆ, ಚಾಟ್ ಸೆಂಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೈನೈಡ್ ಗುಡ್ಡ ವೀಕ್ಷಣೆ ಮಾತ್ರವಲ್ಲದೆ, ಗಣಿ ಪ್ರದೇಶ, ಬಿಜಿಎಂಎಲ್, ಕೃಷ್ಣಾವರಂನಲ್ಲಿರುವ ಜಿಂಕೆ, ಕೋಟಲಿಂಗ ೇತ್ರ, ಬೇತಮಂಗಲದ ಜಲಾಶಯ, ಬಂಗಾರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು, ಚನ್ನೆ$, ಮುಂಬೈ ಹಾಗೂ ದೆಹಲಿಯಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಪ್ರವಾಸಿಗರನ್ನು ತಡೆದಿದ್ದಾರೆಯಾದರೂ ಬೇರೆ ಮಾರ್ಗದಿಂದ ಗುಡ್ಡವನ್ನು ಪ್ರವೇಶಿಸಿ ಚಿತ್ರೀಕರಣದ ಸ್ಥಳ ವೀಕ್ಷಣೆ ಮಾಡಿ, ತಾವು ಬಂದ ಗುರುತಿಗಾಗಿ ಗಿಡ ನೆಟ್ಟು ಹೋಗುತ್ತಿದ್ದಾರೆ.
1880ರಲ್ಲಿ ಸ್ಥಾಪಿತವಾದ ಕೆಜಿಎಫ್ ಚಿನ್ನದ ಗಣಿ 1980ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದೆ. ವಿಶ್ವಕ್ಕೆ ಚಿನ್ನ ನೀಡಿದ ಖ್ಯಾತಿ ಪಡೆದಿದೆ. ಆದರೆ ಚಿನ್ನದ ಗಣಿ 1981&2000 ಅವಧಿಯಲ್ಲಿ ನಿರಂತರವಾಗಿ ನಷ್ಟ ಅನುಭವಿಸಿದ ಕಾರಣ ಕೇಂದ್ರ ಸರ್ಕಾರ ಗಣಿಯನ್ನು ಮುಚ್ಚಿರುವುದರಿಂದ ಕೆಜಿಎಫ್ ಸಾಮಾಜಿಕವಾಗಿ, ಆರ್ಥಿಕವಾಗಿ ನೆಲಕಚ್ಚುವಂತಾಗಿದೆ.
ಗಣಿಯಿಂದ ಹೊರ ತೆಗೆದ ಲಾಂತರ ಟನ್ ಮಣು ಸೈನೈಡ್ ಗುಡ್ಡವಾಗಿ ಪರಿವರ್ತನೆಗೊಂಡಿದೆ. ನಗರಕ್ಕೆ ಈ ಗುಡ್ಡ ಮುಕುಟಪ್ರಾಯವಾಗಿದೆ. ಈ ಗುಡ್ಡದಲ್ಲಿ ಚಿನ್ನದ ಅದಿರು ಇದೆ ಎಂಬ ಕಾರಣಕ್ಕೆ ಕಳ್ಳರು ಗುಡ್ಡವನ್ನು ವಿಕೃತಗೊಳಿಸಿದ್ದಾರೆ. ವಿದೇಶಗಳಲ್ಲಿರುವ ಚಿನ್ನದ ಗಣಿಯ ಆಡಳಿತ ಮಂಡಳಿ ಸೈನೈಡ್ ಗುಡ್ಡವನ್ನು ವಶಕ್ಕೆ ಪಡೆದು ಅದಿರು ಕೊಂಡೊಯ್ಯಲು ಪ್ರಯತ್ನಿಸಿದರಾದರೂ ಕೇಂದ್ರ ಒಪ್ಪಿಗೆ ನೀಡಿಲ್ಲ.
ಆಕರ್ಷಕ ಗುಡ್ಡಗಳು: ಬಿರುಗಾಳಿ ಬೀಸಿದರೆ ಗುಡ್ಡದಿಂದ ಧೂಳು ಹೊರ ಹೊಮ್ಮುವುದರಿಂದ ಜನ&ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪರಿವಾರವಾದಿಗಳು ಆತಂಕ ವ್ಯಕ್ತಪಡಿಸಿದ್ದರಿಂದ ಗುಡ್ಡದ ಮೇಲೆ ಗಿಡಗಳನ್ನು ಬೆಳೆಸಲಾಗಿದೆ. ಈಜಿಪ್ಟ್ನ ಪಿರಮಿಡ್ ರೀತಿ ಸೈನೈಡ್ ಗುಡ್ಡ ವಿನ್ಯಾಸಗೊಂಡಿರುವುದರಿಂದ ಜನರು ಆಕರ್ಷಿತರಾಗಿ ಒಮ್ಮೆಯಾದರೂ ನೋಡಬೇಕೆಂಬ ಕುತೂಹಲದಿಂದ ಬರುತ್ತಿದ್ದಾರೆ.
ಅಭಿವೃದ್ಧಿಗೆ ಮೀನಮೇಷ: ಕೆಜಿಎ್ ನಗರದಲ್ಲಿ ಚಿನ್ನದ ಗಣಿಗೆ ಸೇರಿದ 12.500 ಎಕರೆ ಪೈಕಿ 3500 ಎಕರೆ ಜಾಗವನ್ನು ರಾಜ್ಯ ಸರ್ಕಾರ ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಪಡಿಸಲು ಚಿಂತಿಸಿದೆಯಾದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಕೆಜಿಎಫ್ನಲ್ಲಿ ಇನ್ನೂ ಚಿನ್ನ ಲಭ್ಯವಿದೆ ಎಂಬ ತರ ಅಭಿಪ್ರಾಯದ ಮೇರೆಗೆ ಚಿನ್ನದ ನಿೇಪ ಶೋಧನೆಗಾಗಿ ಸ್ಯಾಂಪಲ್ಗಳನ್ನು ತೆಗೆದು ಹೈದರಾಬಾದಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಅಲ್ಲಿಂದ ವರದಿ ಬರುವುದು ವಿಳಂಬವಾಗುತ್ತಿದೆ.
ಚಿನ್ನದ ಗಣಿ ಪುನರ್ ಆರಂಭಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಉತ್ಪಾದನೆಗೆ ಹೆಚ್ಚಿನ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಕೆಜಿಎಫ್ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯಕ್ರಮ ರೂಪಿಸಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಕೆಜಿಎಫ್ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸುತ್ತದೆ. ಜತೆಗೆ ಸೈನೈಡ್ ಗುಡ್ಡವನ್ನು ಪ್ರವಾಸಿ ತಾಣವಾಗಿಸುವುದರಿಂದ ಆಗುವ ಲಾಭ&ನಷ್ಟ ಕುರಿತು ಗಣಿ ಅಧಿಕಾರಿಗಳು ಸಮೀೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದರೆ ಒಳ್ಳೆಯದು. ಸುರಕ್ಷತೆ ದೃಷ್ಟಿಯಿಂದ ಹಾಗೂ ಚಿನ್ನದ ಅದಿರು ಕಳ್ಳತನವಾಗುವುದನ್ನು ತಪ್ಪಿಸುವ ಸಲುವಾಗಿ ಪ್ರವಾಸಿ ತಾಣವನ್ನಾಗಿಸಲು ಕೇಂದ್ರ ಸರ್ಕಾರ ನಿರಾಕರಿಸುವ ಸಾಧ್ಯತೆ ಇರುವುದರಿಂದ ಕೆಜಿಎಫ್ ಚಿತ್ರ ನಿರ್ಮಾಣ ಸ್ಥಳ ಕೇವಲ ತಾತ್ಕಾಲಿಕ ಪ್ರೇಕ್ಷಣಿಯ ತಾಣವಾಗಿ ಕಾಣಲು ಸಾಧ್ಯವೇ ಹೊರತು ಮೂಲಸೌಕರ್ಯ ಕಲ್ಪಿಸುವುದು ಅನುಮಾನವಾಗಿದೆ.