ಕೆಜಿಎಫ್ ರಸ್ತೆಗಿಳಿದ ಜಿಲ್ಲಾಧಿಕಾರಿ ; ಮಾಸ್ಕ್ ಧರಿಸದವರಿಗೆ ದಂಡ ಸಾರ್ವಜನಿಕ ಆಸ್ಪತ್ರೆಗೆ ಭೇಟಿ

20 KGF 03
Published on

ಕೆಜಿಎಫ್ : ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಅಧಿಕಾರಿಗಳ ತಂಡ ಕೆಜಿಎಫ್ ನಗರ ಸಂಚರಿಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದೆ.

ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಸರ್ಜನ್ ಡಾ.ಶಿವಕುಮಾರ್ ಅವರ ಕಚೇರಿಯಲ್ಲಿ ವೈದ್ಯರ ಸಭೆ ನಡೆಸಿ ಕರೊನಾ ಹೆಚ್ಚಳವಾಗುತ್ತಿದ್ದು, ಸಕಲ ರೀತಿಯಲ್ಲೂ ಎಚ್ಚರದಿಂದ ಇರಬೇಕು ಎಂದರು.

ರೋಗಿಗಳಿಗೆ ಚಿಕಿತ್ಸೆ ನೀಡದೆ ಅನಗತ್ಯವಾಗಿ ದೂರದ ಆಸ್ಪತ್ರೆಗಳಿಗೆ ಕಳುಹಿಸಬೇಡಿ. ಇಲ್ಲೇ ಚಿಕಿತ್ಸೆ ನೀಡಿ. ನಿಮಗೆ ಅಗತ್ಯ ಸವಲತ್ತು ಕಲ್ಪಿಸಲು ಬದ್ಧ. ಕರೊನಾ ನಿಯಂತ್ರಿಸಲು ವೈದ್ಯರ ಪಾತ್ರ ಬಹುಮುಖ್ಯ ಎಂದರು.

ಜನದಟ್ಟಣೆ ಪ್ರದೇಶಗಳಿಗೆ ಭೇಟಿ: ಜನದಟ್ಟಣೆ ಪ್ರದೇಶಗಳಾದ ಎಂ.ಜಿ.ಮಾರುಕಟ್ಟೆ, ಕುವೆಂಪು ಬಸ್ ನಿಲ್ದಾಣ, 1ನೇ ಅಡ್ಡರಸ್ತೆ, 3ನೇ ಅಡ್ಡರಸ್ತೆ ವಾಜಪೇಯಿ ವೃತ್ತ, ಪಿಚರ್ಡ್ ರಸ್ತೆಗಳಲ್ಲಿ ಸಂಚರಿಸಿ ಮಾಸ್ಕ್ ಧರಿಸದೆ ನಿರ್ಲಕ್ಷವಹಿಸಿದವರಿಗೆ ದಂಡ ಹಾಕಿದರು.  ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ತಹಸೀಲ್ದಾರ್ ಸುಜತಾ, ನಗರಸಭೆ ಪೌರಾಯುಕ್ತೆ ಸರ್ವರ್ ಮರ್ಚೆಂಟ್, ತಾಲೂಕು ವೈದ್ಯಾಧಿಕಾರಿ ಸುನೀಲ್‌ಕುಮಾರ್, ಡಿವೈಎಸ್‌ಪಿ ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net