ಹುಬ್ಬಳ್ಳಿ: ದೇಶಪಾಂಡೆನಗರದ ಕರ್ನಾಟಕ ಜಿಮ್ಾನಾ ಅಸೋಸಿಯೇಷನ್ (ಕೆಜಿಎ) ಪೆವಿಲಿಯನ್ ಹಾಗೂ ಮೈದಾನದಲ್ಲಿ ಜ. 12ರಂದು ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೆ ಕೆಜಿಎ ಫನ್ ನ್ ಆಂಡ್ ಫೇರ್ (ಉತ್ಸವ)-2 ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಆಹಾರ ಮಳಿಗೆಗಳು, ಮಕ್ಕಳಿಗಾಗಿ ಪ್ಲೇ ಏರಿಯಾ, ಫ್ಲೀ ಮಾರ್ಕೆಟ್, ಜಾದೂ ಪ್ರದರ್ಶನ, ಸ್ಟೋರಿ ಮಿಮ್ಮಿಕ್ಕಿಂಗ್ ಹಾಗೂ ಅತ್ಯಾಕರ್ಷಕ ಆಟಗಳು ಇರಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದು ಕೆಜಿಎ ಅಧ್ಯಕ್ಷ ಎಚ್.ಎನ್. ನಂದಕುಮಾರ ಹಾಗೂ ಕಾರ್ಯದರ್ಶಿ ವೀರಣ್ಣ ಸವಡಿ ತಿಳಿಸಿದ್ದಾರೆ.