ಕೆಕೆಆರ್‌ಡಿಬಿಯಿಂದ ಕೃತಿ ಖರೀದಿಗೆ ಚಿಂತನೆ

Published on

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಲೇಖಕರು ಹಾಗೂ ಸಾಹಿತಿಗಳು ರಚಿಸಿರುವ ಕೃತಿಗಳನ್ನು ಕೆಕೆಆರ್‌ಡಿಬಿಯಿಂದ ಖರೀದಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಭರವಸೆ ನೀಡಿದರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತದಿಂದ ಭಾನುವಾರ ಏರ್ಪಡಿಸಿದ್ದ ಕನ್ನಡ ನಾಡು ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಕೆಆರ್‌ಡಿಬಿಯಿಂದ ಇಲ್ಲಿನ ಸಾಹಿತಿಗಳು, ಲೇಖಕರ ಕೃತಿಗಳನ್ನು ತಲುಪಿಸಲಾಗುವುದು. ಈ ಕುರಿತು ಎಲ್ಲ ಸಾಹಿತಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
೨೦೧೫-೧೬ನೇ ಸಾಲಿನಲ್ಲಿ ಕೆಕೆಆರ್‌ಡಿಬಿಯ ಆಗಿನ ಕಾರ್ಯದರ್ಶಿ ಆದಿತ್ಯ ಆಮ್ಲನ್ ಬಿಸ್ವಾಸ್ ಈ ಭಾಗದ ಸಾಹಿತಿಗಳ ಕೃತಿಗಳ ಖರೀದಿಗೆ ೨ ಕೋಟಿ ರು. ಮೀಸಲು ಇಟ್ಟು, ಅದನ್ನು ಪರಿಶೀಲಿಸಿ ಮುಂದುವರಿಸಲಾಗುವುದು ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಕಟ್ಟಡ ನಿರ್ಮಾಣ ಅಭಿವೃದ್ಧಿಯಲ್ಲ. ಸಾಂಸ್ಕೃತಿಕ ಅಭಿವೃದ್ಧಿಯು ಮುಖ್ಯ. ಈ ಭಾಗದ ಕಲಾವಿದರ, ಸಾಹಿತಿಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಸಮಿತಿ ರಚಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಡಾ.ಸ್ವಾಮಿರಾವ ಕುಲ್ಕರ್ಣಿ ಮಾತನಾಡಿ, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ೧೬ ವರ್ಷದಿಂದ ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಂಸ್ಕೃತಿ ಪಸರಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಲೇಖಕರಿಗೆ ಈ ಭಾಗದ ರಾಜಕಾರಣಿಗಳು ಪ್ರೋತ್ಸಾಹಿಸಿ, ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಸಂಘದಿAದ ಜೀವಮಾನದ ಸಾಧನೆಗಾಗಿ ಡಾ.ಎಸ್.ಎಸ್.ಸಿz್ದÁರೆಡ್ಡಿ ಸ್ಮಾರಕ ಕನ್ನಡನಾಡು ಸಾಹಿತ್ಯ ಶ್ರೀ ಪ್ರಶಸ್ತಿ ಡಾ.ಪಿ.ಎಸ್.ಶಂಕರ ಅವರಿಗೆ ಪ್ರದಾನ ಮಾಡಲಾಯಿತು.
ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ, ಸಾಹಿತಿ ಮಹಿಪಾಲ ರೆಡ್ಡಿ ಮನ್ನೂರ್, ವಿಜಿ ಮಹಿಳಾ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ರಾಜೇಂದ್ರ ಕೊಂಡಾ ಸೇರಿ ಇತರರಿದ್ದರು. ಡಾ.ಶರಣಬಸಪ್ಪ ವಡ್ಡನಕೇರಿ ನಿರೂಪಣೆ ಮಾಡಿದರು. ಮುಧೋಳದ ಭಜನಾ ಮಂಡಳಿಯಿAದ ಪ್ರಾಥಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net