ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಈ ಭಾಗದ ಸುಮಾರು ೪೨ ಶಾಸಕರು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಹೇಳಿದರು.
ನಗರದ ನ್ಯೂ ಕನ್ನಡ ಶಾಲೆಯ ಹತ್ತಿರ ಹಾಗೂ ಅಂಬೇಡ್ಕರ್ ಚೌಕ್ ಹತ್ತಿರ ಕೆಕೆಆರ್ಡಿಬಿ ೨೦೨೩-೨೪ನೇ ಸಾಲಿನಲ್ಲಿ ಯೋಜನೆಯಡಿ ಅಂದಾಜು ಮೊತ್ತ (ತಲಾ ಒಂದಕ್ಕೆ) ೧೫ ಲP್ಷÀ ರೂ.ನಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಭಾಗದ ಅಭಿವೃದ್ಧಿಗೆ ಅಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿz್ದÁಗ ಹಾಲಿ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಅವರು, ಇಡೀ ಸಂಸತ್ತಿನ ಮನವೊಲಿಸಿ ೩೭೧ ಕಲಂ ಜಾರಿ ಮಾಡುವ ಮೂಲಕ ಕೆಕೆಆರ್ಡಿಬಿಗೆ ಪ್ರತಿ ಐದು ಸಾವಿರ ಕೋಟಿ ರೂ. ಅನುದಾನ ಬರುತ್ತವಂತೆ ಮಾಡಿz್ದÁರೆ. ಇದರ ಫಲವಾಗಿ ಮಂಡಳಿಯಿAದ ಕೆಕೆ ಭಾಗದ ಏಳು ಜಿ¯್ಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ದೊರೆಯುತ್ತಿದೆ ಎಂದರು.
ಹೀಗಾಗಿ ಈ ಭಾಗದ ಶಾಸಕರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಅದರ ಫಲವಾಗಿ ರಸ್ತೆ, ನೀರು, ಆರೋಗ್ಯ, ಶಿP್ಷÀಣ ಸೇರಿ ಮೂಲಭೂತ ಸೌಲಭ್ಯಗಳು ನೀಡಲಾಗಿತ್ತಿದೆ ಎಂದು ಹೇಳಿದರು. ನಗರದಲ್ಲಿ ಕೆಟ್ಟಿರುವ ಆರ್ಒ ಪ್ಲಾಂಟ್ಗಳ ದುರಸ್ತಿಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ವೇಳೆ ನಗರಸಭೆ ಸದಸ್ಯರಾದ ವಿಜಯಲಕ್ಷ್ಮೀ ಕೃಷ್ಟ ನಾನೇಕ, ಮಹೇಶ ಕುರಕುಂಬಳ, ಗೋಪಾಲ ಗಿರಿಯಪ್ಪನೊರ್, ಶಿವಕುಮಾರ ಕರದಳ್ಳಿ, ಕಾರ್ಯಪಾಲಕ ಅಭಿಯಂತರರಾದ ಧನಂಜಯ್ಯ ಆರ್., ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವರಾಜ ಹುಡೇದ್, ಸೂಗುರೆಡ್ಡಿ ಇತರರಿದ್ದರು.