ಕೆಕೆಆರ್‌ಟಿಸಿ ಬಸ್ ಬೈಕ್ ಅಪಘಾತ ಸಾವು

Crime Logo
Published on

ಕಲಬುರಗಿ: ಕೆಕೆಆರ್‌ಟಿಸಿ ಬಸ್ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಆಳಂದ ರಸ್ತೆಯ ತೊಗರಿ ಬೋರ್ಡ್ ಹತ್ತಿರ ಶುಕ್ರವಾರ ನಡೆದಿದೆ. ಸಿದ್ದಾರಾಮ ಜಮಾದಾರ ಮೃತಪಟ್ಟವ. ಆಳಂದ ರಸ್ತೆಯಲ್ಲಿನ ತೊಗರಿ ಬೋರ್ಡð ಬಳಿ ಬರುವಾರ ಕೆಕೆಆರ್‌ಟಿಸಿ ಬಸ್ ಬೈಕ್‌ಗೆ ಗುದ್ದಿದ್ದು, ಗಂಭೀರ ಗಾಯಗೊಂಡ ಸಿದ್ದಾರಾಮ ಜಮಾದಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಮಲ್ಲಿನಾಥ ಜಮಾದಾರ ದೂರಿನಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net