ಕೆಎಲ್ಎಸ್ ಜಿಐಟಿಯಲ್ಲಿ ವನಮಹೋತ್ಸವ ಆಚರಣೆ

KLS GIT TREE PLANTATION DRIVE
ಕೆಎಲ್‌ ಎಸ್‌ ಸಂಸ್ಥೆಯ ಜಿಐಟಿಯಲ್ಲಿ ಸಸಿನೆಡುವ ಅಭಿಯಾನದಲ್ಲಿ ಪ್ರೊ.ಸಂಜಯ್ ದೇಶಪಾಂಡೆ, ಡಾ.ವೆಂಕಟೇಶ ಸಾತ್ವಿಕ್, ಪ್ರೊ.ಡಿ.ಎ.ಕುಲಕರ್ಣಿ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Published on

ಬೆಳಗಾವಿ: ಕೆಎಲ್ಎಸ್ ಜಿಐಟಿಯಲ್ಲಿ ಆಗಸ್ಟ್ 21 ರಂದು ಏಐಸಿಟಿಯಿ ಟ್ರೀ ಪ್ಲಾಂಟೇಶನ್ ಡ್ರೈವ್ ಅಡಿಯಲ್ಲಿ. ಮಹಾಗನಿ, ಬಾದಾಮಿ, ಜಾಮೂನ್ (ಪ್ಲಮ್) ಮತ್ತು ಮಾವು ಸೇರಿದಂತೆ 100 ಸಸಿಗಳನ್ನು ನಡೆವುದರ ಮೂಲಕ ವಿದ್ಯಾರ್ಥಿಗಳು ವನಮಹೋತ್ಸವ ಆಚರಣೆ ಮಾಡಿದರು . ಸಹಪ್ರಾಧ್ಯಾಪಕರಾದ ಡಾ.ಸಂಜಯ ಕೆ ದೇಶಪಾಂಡೆ ಸಮನ್ವಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕೆಎಲ್ಎಸ್ ಜಿಐಟಿಯ ಪ್ರಾಂಶುಪಾಲ ಪ್ರೊ.ಡಿ.ಎ.ಕುಲಕರ್ಣಿ ಗಿಡ ನೆಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಭವಿಷ್ಯದ ಉತ್ತಮ ಪರಿಸರ ನಿರ್ಮಾಣದಲ್ಲಿ ಹಸಿರು ಗಿಡಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಹಾಗೂ ನೆಟ್ಟ ಗಿಡಗಳನ್ನು ಸರಿಯಾಗಿ ನಿರ್ವಹಿಸಲು ಕರೆ ನೀಡಿದರು. ಡೀನ್ ಆಡಳಿತ, ಡಾ.ವೆಂಕಟೇಶ ಸಾತ್ವಿಕ್, ಮಹಾವಿದ್ಯಾಲಯದ ಅಧ್ಯಾಪಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net