ಕೆಎಲ್‌ಇಗೆ ಅಂತಾರಾಷ್ಟ್ರೀಯ ಖ್ಯಾತಿ ತಂದು ಕೊಟ್ಟ ಡಾ.ಕೋರೆ

1blh4
Published on

ಬೈಲಹೊಂಗಲ: ಕೆಎಲ್‌ಇ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದು ಇನಾಮದಾರ ಶುಗರ್ಸ್ ಕಾರ್ಖಾನೆ ನಿರ್ದೇಶಕ ಜಯರಾಜ ಮೆಟಗುಡ್ಡ ಹೇಳಿದರು.

ಸಮೀಪದ ಇನಾಮದಾರ ಶುಗರ್ಸ್ ಕಾರ್ಖಾನೆಯಲ್ಲಿ ಕಾರ್ಖಾನೆಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಜನ್ಮದಿನ ನಿಮಿತ್ತ ಕಳೆದ ಕಾರ್ಖಾನೆ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕಾರ್ಖಾನೆ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ನಿರ್ದೇಶಕ ವಿಜಯ ಮೆಟಗುಡ್ಡ ಮಾರ್ಗದರ್ಶನದಲ್ಲಿ ಕೇವಲ ೧೦ ತಿಂಗಳಲ್ಲಿ ಕಾರ್ಖಾನೆ ಹುಟ್ಟು ಹಾಕಿ ಪ್ರಥಮ ವರ್ಷದಲ್ಲಿಯೇ ಸಕ್ಕರೆ ವಿತರಿಸಲಾಗುತ್ತಿದೆ ಎಂದರು.

ಲಿಂಗಾಯತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಡಾ.ಪ್ರಭಾಕರ ಕೋರೆ ನಾಡಿಗೆ ನೀಡಿದ ಕೊಡುಗೆ ಅಪಾರ ಎಂದರು.

ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಪಟ್ಟಣಶೆಟ್ಟಿ, ಭಾರತೀಯ ಕಿಸಾನ್ ಸಂಘದ ಕಾರ್ಯಕಾರಿಣಿ ಸದಸ್ಯ ರಾಮರಾಜ ಇನಾಮದಾರ, ಸಂಜು ಕುಪ್ಪಸಗೌಡ್ರ, ತಾಪಂ ಮಾಜಿ ಸದಸ್ಯ ಶ್ರೀಕಾಂತ ಸುಂಕದ, ಕೇನ್ ಮ್ಯಾನೇಜರ್ ಬಾಳಗೊಂಡ ಶೇಗುಣಸಿ, ನಾಮದೇವ ಸಿಂಗನ್ನವರ, ಮಾನವ ಸಂಪನ್ಮೂಲ ಅಧಿಕಾರಿ ವೀರಯ್ಯ ವಿರಕ್ತಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net