ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರ

15ckd6
Published on

ಚಿಕ್ಕೋಡಿ: ಶಿಕ್ಷಣದ ಸೇವೆಯಲ್ಲಿ ಕರ್ನಾಟಕಕ್ಕೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಇಲ್ಲಿ ಕಲಿತ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ ಎಂದು ರಾಜ್ಯ ಡಿಪ್ಲೊಮಾ ಇನ್ ನರ್ಸಿಂ ಗ್ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ಹಾಗೂ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ, ದೀಪ ಬೆಳಗಿಸುವ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ಹಚ್ಚುವ ದೀಪ ಜ್ಞಾನ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ರೋಗಿಗಳ ಕಷ್ಟದಲ್ಲಿ ಬೆಳಕಾಗುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ವೈದ್ಯಕೀಯ ವೃತ್ತಿಯಲ್ಲಿ ಶುಶ್ರೂಕ ಸೇವೆ ಪವಿತ್ರವಾಗಿದೆ. ಶುಶ್ರೂಕರ ಭರವಸೆಯ ಮಾತು ರೋಗಿಯನ್ನು ಗುಣಪಡಿಸುತ್ತದೆ. ವಿದ್ಯಾರ್ಥಿಗಳು ಸಂವಹನ ಕಲೆ ಬೆಳೆಸಿಕೊಳ್ಳಬೇಕು ಎಂದರು.

ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ಪ್ರಾಧ್ಯಾಪಕ ಡಾ. ಸೋಮಶೇಖರಯ್ಯ ಕಲ್ಮಠ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಸಕಾರಾತ್ಮಕ ಯೋಚನೆಯ ಜತೆಗೆ ಮುನ್ನಡೆಯಬೇಕು. ರೋಗಿಗಳ ಆರೈಕೆಯಲ್ಲಿ ಶುಶ್ರೂಕರ ಪಾತ್ರ ಪ್ರಮುಖವಾಗಿದೆ. ಕುಟುಂಬ ಸದಸ್ಯರಂತೆ ರೋಗಿಗಳನ್ನು ಆರೈಕೆ ಮಾಡಬೇಕು ಎಂದರು.

ಪ್ರಾಚಾರ್ಯ ಡಾ. ಸುನೀಲ ಎಂ.ಬಿ. ಮಾತನಾಡಿದರು. ಉಪನ್ಯಾಸಕರಾದ ಸೋನಾಲಿ ಜಾಧವ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಸಚಿನ ಸುಬ್ರಗೌಡರ, ಮಲಕಾರಿ ಘಸ್ತೆ, ಸೋಲಾಲಿ ರಾಥೋಡ, ಅಂಬಿಕಾ ದಳವಾಯಿ, ನಿಧಿ ಸಾವಂತ, ಡಾ. ಸಚಿನ ಮೆಕ್ಕಳಕಿ ಇತರರಿದ್ದರು. ಉಪನ್ಯಾಸಕರಾದ ಗಂಗಾ ಅರಭಾವಿ, ಸಹಾಯಕ ಪ್ರಾಧ್ಯಾಪಕ ಅನಿತಾ ಬಿರಾಜ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮೌನೇಶ ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net