ಕೆಎಲ್​ಇ ವಿಶ್ವವ್ಯಾಪಿಗೊಳಿಸಿದ ಡಾ.ಕೋರೆ

4athani2 kore
ಎಸ್​.ಎಸ್​.ಎಂ.ಎಸ್​. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯ ಡಾ. ಮಲ್ಲಿಕಾರ್ಜುನ ಹಂಜಿ ಸಸಿ ನೆಡುತ್ತಿರುವುದು.
Published on

ಅಥಣಿ: ಬಸವಣ್ಣನವರ ಕಾಯಕ, ದಾಸೋಹ ತತ್ತ$$$್ವವನ್ನ ಅರಶ@ ಪಾಲಿಸಿ ಅದರಂತೆ ಮುನ್ನಡೆಯುತ್ತಿರುವ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯ ಡಾ.ಪ್ರಭಾಕರ ಕೋರೆ ಅವರು ಶೆಣಿಕ, ಆರೋಗ್ಯ ೇತ್ರದ ಹರಿಕಾರರಾಗಿದ್ದಾರೆ. ಅವರು ತಮ್ಮ ಬದುಕನ್ನೇ ಸಮಾಜಕ್ಕೆ ಸಮರ್ಪಿಸಿಕೊಂಡು ಮಹಾನ್​ ವ್ಯಕ್ತಿಯಾಗಿದ್ದಾರೆ ಎಂದು ಅಥಣಿ ಎಸ್​.ಎಂ.ಎಸ್​. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯ ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದರು.

ಅವರು ಸ್ಥಳಿಯ ಕೆ.ಎಲ್​.ಇ. ಅಂಗ ಸಂಸ್ಥೆಗಳ ಆಶ್ರಯದಲ್ಲಿ ಶಿಣ ತ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಕೆ.ಎಲ್​.ಇ. ಸಂಸ್ಥೆಯ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮದಿನದ ಅಂಗವಾಗಿ ಮಂಗಳವಾರ 76 ವಿವಿಧ ಬಗೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಧಾರ್ಮಿಕ, ಸಾಮಾಜಿಕ, ಶೆಣಿಕ, ಔದ್ಯೋಗಿಕ, ವೈದ್ಯಕಿಯ, ಕಷಿ, ರಾಜಕೀಯ ಹೀಗೆ ಹತ್ತು ಹಲವು ೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಅರಿವು, ಅನ್ನ, ಆಶ್ರಯ ನೀಡುವ ಜತೆಗೆ ಲಾಂತರ ಜನರ ಬದುಕಿಗೆ ಬೆಳಕಾಗಿದ್ದಾರೆ. ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶದಿಂದ ವಿದೇಶದವರೆಗೂ ಕಾರ್ಯವ್ಯಾಪ್ತಿ ಹೆಚ್ಚಿಸುವ ಮೂಲಕ ಕೆಎಲ್​ಇ ಸಂಸ್ಥೆಯ ಹೆಸರು ಅಜರಾಮವಾಗಿಸಿದ್ದಾರೆ. ಉತ್ತಮ ಸಂಸ್ಕಾರ ಪಡೆದ ವ್ಯಕ್ತಿ ಸಮಾಜದ ಆಸ್ತಿಯಾಗುತ್ತಾರೆ ಎಂಬುದಕ್ಕೆ ಡಾ.ಪ್ರಭಾಕರ ಕೋರೆ ಅವರೇ ಸಾ ಎಂದು ಹೇಳಿದರು.

ವೀರಶೈವ ಲಿಂಗಾಯತರ ಎರಡು ಮಹತ್ವದ ಗುಣಗಳಾದ ಕಾಯಕ, ದಾಸೋಹ ಜತೆಗೆ ದಾನದ ಮಹತ್ವವನ್ನ ತಮ್ಮ ತಂದೆ, ತಾಯಿಗಳಿಂದ ಅರಿತಿದ್ದ ಡಾ. ಪ್ರಭಾಕ ಕೋರೆ ಅವರು ಅದರಂತೆಯೇ ಸಾಗುತ್ತಿದ್ದಾರೆ ಎಂದರು. ಕೆಎಲ್​ಇ ಸಂಸ್ಥೆ ಉತ್ತರ ಕರ್ನಾಟಕದಲ್ಲೆ ಪ್ರಪಥಮವಾಗಿ 10 ಹದಯ ಕಸಿ, ಕಿಡ್ನಿ, ಲಿವ್ಹರ್​ ಕಸಿ ಮಾಡಿ ಅತ್ಯಾಧುನಿಕ ರೆಡಿಯೆಷನ್​ ಚಿಕಿತ್ಸೆಯನ್ನು ಕಾನ್ಸರ್​ ರೋಗಿಗಳಿಗೆ ನಿಡಿದ್ದಾರೆ. ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಕೆಎಲ್​ಇ ಆಸ್ಪತ್ರೆ ಹೊಂದಿದೆ ಎಂದರು.


ಸದಸ್ಯರಾದ ಎಸ್​.ಜಿ. ಮಮದಾಪೂರ, ವಿಜಯ ಬುರ್ಲಿ, ಪ್ರಕಾಶ ಪಾಟೀಲ, ಅನೀಲ ಮೆಣಸಿ, ಅಲ್ಲಪ್ಪ ನಿಡೋನಿ, ಶಿವಶಂಕರ ಹಂಜಿ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಪ್ರಾಚಾರ್ಯ ಡಾ. ಬಿ.ಎಸ್​.ಕಾಂಬಳೆ, ಡಾ. ಪ್ರಶಾಂತ ಮಗದುಮ್​, ಕತಿಕಾ ೂಷ, ಎಸ್​.ಜಿ. ಸಲಗರ, ರಾಜಶೇಖರ ಶಿಂಧೆ, ಪರಮಾನಂದ ನಾಯಿಕ, ರಾಜು ವಂಟಗುಡೆ, ಅಪ್ಪಯ್ಯ ಹಿರೇಮಠ, ಅಂಗಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net