ಕೆಎಂಎಸ್ ಕಾಲೇಜಿಗೆ ಶೇ 92ರಷ್ಟು ಫಲಿತಾಂಶ

Aanjeela
Published on

ಚಿತ್ರದುರ್ಗ: ನಗರದ ಕೆಎಂಎಸ್ ಸ್ವತಂತ್ರ ಪಪೂ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ 92ರಷ್ಟು ಫಲಿತಾಂಶ ಲಭಿಸಿದೆ.

ಆಂಜಿಲಾ ಅಲ್ಮಂಡ್ ಸರ್ಕಿಸ್ 600ಕ್ಕೆ 559 ಅಂಕ (ಶೇ 93) ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಎನ್.ಆಕಾಶ್ 457 (ಶೇ 76) ದ್ವಿತೀಯ, ಜಿ.ಜೀವನ್ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ನಿರ್ದೇಶಕ ಕೆ.ಎಂ.ಚೈತನ್ಯ, ಪ್ರಾಚಾರ್ಯ ಜಿ.ಎನ್.ವೀರೇಶ್, ಕೆಎಂಎಸ್ ಪ್ರ.ದ.ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಮಂಜುಳಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net