ಕೆಇಎ ಪರೀಕ್ಷೆ ಅಕ್ರಮಕ್ಕೆ ಸಾಥ್ ನೀಡಿದ್ದ ಆರೋಪಿ ಬಂಧನ

scamm
ಸಾಂದರ್ಭಿಕ ಚಿತ್ರ
Published on

ಕಲಬುರಗಿ: ಕೆಇಎ ಪರೀಕ್ಷೆಯಲ್ಲಿ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ ನೆರವಾಗಿದ್ದ ಆರೋಪಿ ಆಸೀಫ್‌ನನ್ನು ಗುರುವಾರ ಬಂಧಿಸಲಾಗಿದೆ. ಅ.೨೮ರಂದು ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಬ್ಲೂಟೂತ್ ಬಳಸಿ ಕೆಇಎ ಪರೀಕ್ಷೆ ಅಕ್ರಮವಾಗಿ ಬರೆಯಲು ಅಭ್ಯರ್ಥಿಗೆ ನೆರವಾಗಿದ್ದಕ್ಕೆ ಪ್ರಕರಣ ದಾಖಲಾಗಿತ್ತು.

ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಕೆಇಎ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಾಬು ಚಾಂದಶೇಖ್ ತನ್ನಲ್ಲಿದ್ದ ಬ್ಲೂಟೂತ್ ಡಿವೈಸ್‌ನ್ನು ತಪಾಸಣೆ ವೇಳೆ ತಡವಲಗ ಗ್ರಾಮದ ಆಸೀಫ್ ಬಾಗವಾನ್‌ಗೆ ನೀಡಿದ್ದ. ಅದನ್ನು ಪಡೆದು ಆಸೀಫ್ ಪರಾರಿಯಾಗಿದ್ದ. ಡಿವೈಎಸ್ಪಿ ಗೋಪಿನಾಥ ನೇತೃತ್ವದ ತನಿಖಾ ತಂಡ ಬಂಧಿಸಿದೆ. ಈ ಕುರಿತು ಒಂಬತ್ತು ಜನರ ವಿರುದ್ಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net