ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗೆ ಚಾಲನೆ

30-09--krs1 (4)
Published on

ಕೆ.ಆರ್.ಸಾಗರ: ಮೈಸೂರು ದಸರಾ ಮಹೋತ್ಸವ ಅಂಗವಾಗಿ ಕೆ.ಆರ್.ಸಾಗರ ಹಿನ್ನೀರಿನ ಉಂಡವಾಡಿ ಗ್ರಾಮದ ನಡುಗಡ್ಡೆ ಬಳಿ ಆಯೋಜಿಸಿರುವ ಜಲ ಸಾಹಸ ಕ್ರೀಡೆಗೆ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಅ.6ರವರೆಗೆ ಜಲ ಸಾಹಸ ಕ್ರೀಡೆ ಆಯೋಜಿಸಲಾಗಿದೆ. ಜೆಟ್‌ಸ್ಕಿ, ಬನಾನ ರೈಡ್, ಸ್ಪೀಡ್ ಬೋಟ್, ರಾಫ್ಟ್ ಬೋಟ್, ಯಾಕಿಂಗ್ ಬಂಪರ್ ರೈಡ್ ಮುಂತಾದ ಕ್ರೀಡೆಗಳಿದ್ದು, ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ರತನಕ ಸಾರ್ವಜನಿಕರಿಗೆ ರಿಯಾಯಿತಿ ದರ ನಿಗದಿಪಡಿಸಲಾಗಿದೆ.

ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಗೋಪಾಲಕೃಷ್ಣ, ಉಪ ನಿರ್ದೇಶಕರಾದ ಮಂಜುಳಾ, ರೋಹಿತ್ ಗಂಗಾಧರ್, ಎಸ್ಪಿ ಚೇತನ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಸುಬ್ಬಣ್ಣ ಕುಬ್ರಳ್ಳಿ, ಜನರಲ್ ತಿಮ್ಮಯ್ಯ ಅಕಾಡೆಮಿ ವ್ಯವಸ್ಥಾಪಕ ಮಂಜುನಾಥ್, ಗ್ರಾಪಂ ಸದಸ್ಯ ಪ್ರಕಾಶ್, ವಾರ್ತಾ ಇಲಾಖೆ ಅಧಿಕಾರಿ ಹರೀಶ್, ಸಮಿತಿ ಸದಸ್ಯರಾದ ಚೇತನ್, ಶಿವರಾಜು, ನಾಗಣ್ಣಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net