ಕೆಆರ್‌ಎಸ್‌ನಿಂದ ತ.ನಾಡಿಗೆ ಕಾವೇರಿ

05-08--krs1 (6)
Published on

ಕೆ.ಆರ್.ಸಾಗರ: ತಮಿಳುನಾಡಿಗೆ ಜುಲೈ ತಿಂಗಳ ಬಾಕಿ 29 ಟಿಎಂಸಿ ನೀರು ಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಅಣಕೆಟ್ಟೆಯಿಂದ ಶುಕ್ರವಾರ ರಾತ್ರಿಯಿಂದ ಸುಮಾರು 5 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.


ತಮಿಳುನಾಡಿಗೆ ಜೂನ್-ಜುಲೈ ತಿಂಗಳಲ್ಲಿ 40 ಟಿಎಂಸಿ ಮತ್ತು ಆಗಸ್ಟ್ ತಿಂಗಳಲ್ಲಿ 45 ಟಿಎಂಸಿ ನೀರು ಕೊಡಬೇಕಾಗಿದೆ. 49.454 ಟಿಎಂಸಿ ಗರಿಷ್ಟ ಮಟ್ಟದ ಅಣೆಕಟ್ಟೆಯಲ್ಲಿ ಪ್ರಸ್ತುತ 35.32 ಟಿಎಂಸಿ ನೀರು ಸಂಗ್ರಹವಿದೆ. ಶನಿವಾರ ಅಣೆಕಟ್ಟೆಯ ನೀರಿನ ಮಟ್ಟ 113.44 ಅಡಿ ಇದ್ದು, ಒಳಹರಿವು 5270 ಕ್ಯುಸೆಕ್, ಹೊರಹರಿವು 5356 ಕ್ಯುಸೆಕ್ ಇದೆ.


ಕಳೆದ ಹತ್ತು ದಿನಗಳಿಂದ ಸುಮಾರು 2 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಬಿಡಲಾಗುತಿತ್ತು. ಆದರೆ ತಮಿಳುನಾಡು ಸರ್ಕಾರ ಕಾವೇರಿ ಪ್ರಾಧಿಕಾರದ ಅದೇಶ ಪಾಲನೆಯಾಗಿಲ್ಲ. ತನ್ನ ಪಾಲಿನ ನೀರು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಕ್ಯಾತೆ ತೆಗೆದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಸಂಕಷ್ಟ ಸೂತ್ರದಲ್ಲಿ ಬಾಕಿ ಕೊಡಬೇಕಾದ ನೀರಿನಲ್ಲಿ ಅರ್ಧ ಪಾಲು ನೀಡಲು ಸರ್ಕಾರ ಪ್ರಯತ್ನ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸಚಿವರು ಮತ್ತು ಅಧಿಕಾರಿಗಳ ಸಭೆ ಕೂಡ ನಡೆಸಲಾಗಿದೆ.


ರಾಜ್ಯದ ರೈತರಿಗೆ ಮುಂಗಾರು ಭತ್ತದ ಬೆಳೆ ಬೆಳೆಯಲು ಈ ಬಾರಿ ನೀರು ಸಿಗುವುದು ಕಷ್ಟ ಎಂಬುದು ಅಧಿಕಾರಿ ವಲಯದ ಕೇಳಿ ಬರುತ್ತಿರುವ ಮಾತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net