

ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದಲ್ಲಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಜಾಗೃತಿ ಮೂಡಿಸಲು ಶ್ರೀರಂಗಪಟ್ಟಣ ತಾಲೂಕು ಮತ್ತು ಕೆ.ಆರ್.ಸಾಗರ ಸ್ವೀಪ್ ಸಮಿತಿ ವತಿಯಿಂದ ಬುಧವಾರ ಕಿರಿಯ ಪ್ರಾಥಮಿಕಶಾಲೆ (ಮುಂಭಾಗ) ರಂಗೋಲಿ ಸ್ಪರ್ಧೆ ಮತ್ತು ಮತದಾನ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.
ಗ್ರಾಮದ ಮಹಿಳೆಯರು ಮತದಾನದ ಕುರಿತು ಅರಿವು ಮೂಡಿಸುವ ರಂಗೋಲಿಗಳನ್ನು ಬಿಡಿಸಿ ಗಮನ ಸೆಳೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನಿತಾ(ಪ್ರ), ಪುಷ್ಪಾ (ದ್ವಿ) ಮತ್ತು ಸವಿತಾ (ತೃ) ಬಹುಮಾನ ಪಡೆದರು.
ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧ್ದಿ) ಮೋಹನ್ ಕುಮಾರ್ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಜಾಥಾಗೆ ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಎಂ.ಎಸ್. ವೀಣಾ ಚಾಲನೆ ನೀಡಿದರು. ಮತದಾನ ಕುರಿತು ಚಿತ್ರ ಸಹಿತ ಬರಹವುಳ್ಳ ಘೋಷಣಾ ಫಲಕಗಳನ್ನು ಹಿಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ (ಆಡಳಿತ) ರವಿಂದ್ರ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರಮೇಶ್, ಪಿಡಿಒ ರಫೀಕ್ ಕರ್ಜಗಿ, ನೋಡಲ್ ಅಧಿಕಾರಿ ರಾಮಪ್ರಸಾದ ಪೊನ್ನಸ್ವಾಮಿ, ಗ್ರಾಪಂ ಕಾರ್ಯದರ್ಶಿ ರವಿ, ಮತದಾನ ಅರಿವು ಸದಸ್ಯೆ ಸುಮಾ, ಬಿಎಲ್‌ಒಗಳು, ಆಶಾ, ಅಂಗವಾಡಿ ಕಾರ್ಯಕರ್ತೆಯರು, ಸ್ವ ಸಹಾಯ-ಸೇವಾ ಪ್ರತಿನಿಧಿಗಳು, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.