ಕೆಆರ್‌ಎಸ್ ಹಿನ್ನೀರಿನಲ್ಲಿ ಕೆಂಪುಮಣ್ಣಿಗೆ ಕನ್ನ

24-06--krs2 (3)
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಅಕ್ರಮವಾಗಿ ಟನ್‌ಗಟ್ಟಲ್ಲೆ ಕೆಂಪು ಮಣ್ಣು ತೆಗೆದು ಇಟ್ಟಿಗೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ.
ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದಂತೆಯೇ ಅಕ್ರಮ ಮಣ್ಣುಗಾರಿಕೆ ಜೋರಾಗಿ ನಡೆಯುತ್ತಿದ್ದು, ಅಧಿಕಾರಿಗಳಿಗೂ ಹೆದರದೆ ಹಿನ್ನೀರಿನಲ್ಲಿ ಹಲವು ಕಡೆ ಮಣ್ಣು ತೆಗೆದು ಗುಂಡಿಯಾಗಿದೆ.


ಕೆ.ಆರ್.ಸಾಗರ ಹಿನ್ನೀರಿನ ಪ್ರದೇಶಗಳಾದ ಬೋರೆ ಆನಂದೂರು, ಮೀನಾಕ್ಷಿಪುರ, ಎಡಹಳ್ಳಿ, ಹೊಸಕೋಟೆ, ಮೂಲೆಪೆಟ್ಲು ಸೇರಿದಂತೆ ಇತರೆಡೆ ನೀರು ಸಂಗ್ರಹ ಕಡಿಮೆಯಾದ ಹಿನ್ನೀರಿನ ಒಳಗಡೆ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ಲಕ್ಷಾಂತರ ಟನ್ ಕೆಂಪುಮಣ್ಣು ತೆಗೆದು ಸಾಗಣೆ ಮಾಡಲಾಗುತ್ತಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಮಣ್ಣು ತೆಗೆಯದಂತೆ ತಿಳಿಸಿದ್ದರೂ ಅವರ ಮಾತಿಗೂ ಬೆಲೆ ಕೊಡದೆ ಪ್ರಭಾವ ಬಳಸಿ ಮಣ್ಣು ತೆಗೆಯಲಾಗುತ್ತಿದೆ.


ಇಟ್ಟಿಗೆ ಮಾಡಲು ಯಾವುದೇ ಬಂಡವಾಳ ಇಲ್ಲದೆ ಉತ್ತಮವಾದ ಕೆಂಪು ಮಣ್ಣು ಸಿಗುತ್ತದೆ ಎಂದು ತೆಗೆಯುತ್ತಿದ್ದರೆ ಅಣೆಕಟ್ಟೆ ತೊಂದರೆಯಾಗುವುದರಲ್ಲಿ ಯಾವುದೇ ಸಂದಹೇವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net