ಕೆಆರ್‌ಎಸ್ ಯೋಜನಾ ಶಾಖೆ ನೌಕರರಿಗೆ ಸನ್ಮಾನ

30-01--krs1
ಶಿವಮೊಗ್ಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ದ್ವೀತಿಯ ಸ್ಥಾನ ಪಡೆದ ಕೆ.ಆರ್.ಸಾಗರ ಯೋಜನಾ ಶಾಖೆಯ ಸರ್ಕಾರಿ ನೌಕರ ಸಂಘದ ಸದಸ್ಯರನ್ನು ಕೆ.ಜೆ.ಮಹೇಶ್ ಸನ್ಮಾನಿಸಿದರು. ಹೇಮಂತ್ ಕುಮಾರ್, ಶಿವಕುಮಾರ್, ವಿನೋದ್, ವೆಂಕಟೇಶ್ ನಾಯ್ಡು ಸೇರಿದಂತೆ ಸದಸ್ಯರು ಇದ್ದರು.
Published on

ಕೆ.ಆರ್.ಸಾಗರ: ಇತ್ತೀಚೆಗೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಕೆ.ಆರ್.ಸಾಗರ ಯೋಜನಾ ಶಾಖೆಯ ಸರ್ಕಾರಿ ನೌಕರ ಸಂಘದ ಸದಸ್ಯರನ್ನು ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಜೆ. ಮಹೇಶ್ ಮಂಗಳವಾರ ಸನ್ಮಾನಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಿವಪ್ಪ, ಎಂ.ನಾಗೇಶ್, ಟಿ.ಕೆ.ನಾಗೇಶ್, ಮಂಜುನಾಥ್ ಬಾಬು, ರವಿಕುಮಾರ್, ರಾಘವೇಂದ್ರ, ಅಭಿಷೇಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ತರಬೇತಿ ಕೇಂದ್ರದ ಪ್ರಾಂಶುಪಾಲ ಹೇಮಂತ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನೋದ್, ಕಾರ್ಯದರ್ಶಿ ವೆಂಕಟೇಶ್ ನಾಯ್ಡು ಸೇರಿದಂತೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net